×
Ad

ಬ್ರಾಡ್ ರ ಮಾನಸಿಕ ಆಟಕ್ಕೆ ವಿಕೆಟ್ ಕಳೆದುಕೊಂಡ ಲ್ಯಾಬುಶೇನ್!

Update: 2023-07-30 00:04 IST

ಕೆನ್ಸಿಂಗ್ಟನ್ ಓವಲ್ (ಲಂಡನ್) : ಲಂಡನ್ನ ಕೆನ್ಸಿಂಗ್ಟನ್ ಓವಲ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯ ವಿರುದ್ಧದ ಆ್ಯಶಸ್ ಟೆಸ್ಟ್ ಸರಣಿಯ ಐದನೇ ಹಾಗೂ ಕೊನೆಯ ಪಂದ್ಯದ ಎರಡನೇ ದಿನವಾದ ಶುಕ್ರವಾರ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ರಮಾನಸಿಕ ಆಟವು ಗಮನ ಸೆಳೆಯಿತು.

ಆಸ್ಟ್ರೇಲಿಯದ ಮೊದಲ ಇನಿಂಗ್ಸ್ನಲ್ಲಿ ಮಾರ್ನಸ್ ಲ್ಯಾಬುಶೇನ್ ಬ್ಯಾಟಿಂಗ್ ಮಾಡುತ್ತಿದ್ದಾಗ, ಬ್ರಾಡ್ ವಿಕೆಟ್ಗಳ ನಡುವಿನ ಬೇಲ್ಸ್ ಗಳನ್ನು ಆಚೀಚೆ ಮಾಡಿದರು ಹಾಗೂ ಮುಂದಿನ ಎಸೆತದಲ್ಲೇ ಲ್ಯಾಬುಶೇನ್ ಔಟಾದರು.

43ನೇ ಓವರ್ನ ನಾಲ್ಕನೇ ಎಸೆತವನ್ನು ಮಾರ್ಕ್ವುಡ್, ಲ್ಯಾಬುಶೇನ್ಗೆ ಎಸೆದರು. ಅದರಿಂದ ಯಾವುದೇ ರನ್ ಹುಟ್ಟಲಿಲ್ಲ. ಆಗ ಬ್ರಾಡ್ ಬೇಲ್ಗಳನ್ನು ಆಚೀಚೆ ಮಾಡುವ ಮೂಲಕ ತನ್ನ ಚೇಷ್ಟೆ ಪ್ರದರ್ಶಿಸಿದರು. ಆ ಓವರ್ನ ಐದನೇ ಎಸೆತವು ಲ್ಯಾಬುಶೇನ್ ಬ್ಯಾಟ್ನಲ್ಲಿ ಔಟ್ಸೈಡ್ ಎಜ್ ಆಯಿತು. ಆ ಚೆಂಡನ್ನು ಜೋ ರೂಟ್ ಫಸ್ಟ್ ಸ್ಲಿಪ್ನಲ್ಲಿ ಅದ್ಭುತವಾಗಿ ಕ್ಯಾಚ್ ಹಿಡಿದರು.

ಸ್ಟೀವ್ ಸ್ಮಿತ್ರ 71 ರನ್ಗಳ ನೆರವಿನಿಂದ ಆಸ್ಟ್ರೇಲಿಯವು ತನ್ನ ಮೊದಲ ಇನಿಂಗ್ಸ್ನಲ್ಲಿ 295 ರನ್ಗಳನ್ನು ಗಳಿಸಿತು. ಇದರೊಂದಿಗೆ ಅದು 12 ರನ್ಗಳ ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿದೆ. ಇಂಗ್ಲೆಂಡ್ ತನ್ನ ಮೊದಲ ಇನಿಂಗ್ಸ್ನಲ್ಲಿ 283 ರನ್ಗಳನ್ನು ಕಲೆ ಹಾಕಿತ್ತು.

ಒಂದು ಹಂತದಲ್ಲಿ 2 ವಿಕೆಟ್ಗಳ ನಷ್ಟಕ್ಕೆ 115 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಆಸ್ಟ್ರೇಲಿಯವು ಬಳಿಕ 185 ರನ್ಗಳನ್ನು ಗಳಿಸುವಷ್ಟರಲ್ಲಿ 7 ವಿಕೆಟ್ಗಳನ್ನು ಕಳೆದುಕೊಂಡಿತು. ಆದರೆ, ಸ್ಮಿತ್ ಮತ್ತು ಆಸ್ಟ್ರೇಲಿಯ ನಾಯಕ ಪ್ಯಾಟ್ ಕಮಿನ್ಸ್ (36) 8ನೇ ವಿಕೆಟ್ಗೆ 54 ರನ್ಗಳನ್ನು ಸೇರಿಸಿ ಆಸ್ಟ್ರೇಲಿಯ ಇನಿಂಗ್ಸ್ಗೆ ಆಸರೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News