×
Ad

ಭಾರತ-ಪಾಕ್ ಏಶ್ಯಕಪ್ ಪಂದ್ಯಕ್ಕೆ ಪ್ರೇಕ್ಷಕರ ಕೊರತೆ!

Update: 2023-09-02 23:07 IST

Photo: Twitter

ಪಲ್ಲೆಕೆಲೆ: ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಸಾಮಾನ್ಯವಾಗಿ ಪ್ರೇಕ್ಷಕರು ಸ್ಟೇಡಿಯಮ್ನಲ್ಲಿ ಕಿಕ್ಕಿರಿದು ನೆರೆದಿರುತ್ತಾರೆ. ಆದರೆ ಕ್ಯಾಂಡಿಯ ಪಲ್ಲೆಕೆಲೆ ಸ್ಟೇಡಿಯಮ್ನಲ್ಲಿ ಶನಿವಾರ ನಡೆದ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಏಶ್ಯಕಪ್ ಎ ಗುಂಪಿನ ಪಂದ್ಯದಲ್ಲಿ ಅಂತಹ ದೃಶ್ಯ ಕಂಡುಬರಲಿಲ್ಲ ಎಂದು ವರದಿಯಾಗಿದೆ.

ಭಾರತವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದರೂ ಸ್ಟೇಡಿಯಮ್ನಲ್ಲಿ ಸಾಮರ್ಥ್ಯದಷ್ಟು ಪ್ರೇಕ್ಷಕರು ಸೇರಿರಲಿಲ್ಲ.

ನೀವು ನೋಡುತ್ತಿರುವಂತೆ ಟಿಕೆಟ್ಗಳು ಸಂಪೂರ್ಣವಾಗಿ ಮಾರಾಟವಾಗಿಲ್ಲ. ವಾಸ್ತವವಾಗಿ ನಿನ್ನೆ ಸಂಜೆ ಕ್ಯಾಂಡಿ ಹಾಗೂ ಕೊಲಂಬೊದಲ್ಲಿ ಟಿಕೆಟ್ಗಳ ಮಾರಾಟ ಆರಂಭವಾಯಿತು. ಗ್ರ್ಯಾಂಡ್ ಸ್ಟ್ಯಾಂಡ್ನಲ್ಲಿ ಟಿಕೆಟ್ಗಾಗಿ ಹೆಚ್ಚು ಬೇಡಿಕೆ ಇರಲಿಲ್ಲ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಟಿಕೆಟ್ಗಳು ಸುಲಭವಾಗಿ ಲಭ್ಯವಿದ್ದವು. ವಾಸ್ತವವಾಗಿ ನನಗೆ ನಿನ್ನೆ ಕೊಲಂಬೊದಲ್ಲಿ ಟಿಕೆಟ್ ಲಭಿಸಿತ್ತು. ಇದು ಭಾರತ ಹಾಗೂ ಪಾಕಿಸ್ತಾನ ಪಂದ್ಯವಾಗಿದ್ದರಿಂದ ಟಿಕೆಟ್ಗಳು ಲಭ್ಯವಾಗುವುದಿಲ್ಲ ಎಂದು ನಾವು ಭಾವಿಸಿದ್ದೆವು. ಆದರೆ ಹಾಗಾಗಿರಲಿಲ್ಲ ಎಂದು ಕೊಲಂಬೊದಲ್ಲಿ ತಮ್ಮ ವ್ಯಾಪಾರವನ್ನು ನಡೆಸುತ್ತಿರುವ ವರುಣ್ ಘೋಷ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News