×
Ad

ಮಲೇಶ್ಯ ಮಾಸ್ಟರ್ಸ್: ಶ್ರೀಕಾಂತ್ ಕ್ವಾರ್ಟರ್ ಫೈನಲ್‌ ಗೆ

Update: 2025-05-22 20:13 IST

ಕಿಡಂಬಿ ಶ್ರೀಕಾಂತ್ | Photo: PTI

ಕೌಲಾಲಂಪುರ: ಭಾರತದ ಹಿರಿಯ ಬ್ಯಾಡ್ಮಿಂಟನ್ ಆಟಗಾರ ಕಿಡಂಬಿ ಶ್ರೀಕಾಂತ್ ಮಲೇಶ್ಯ ಮಾಸ್ಟರ್ಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ ಗೆ ತಲುಪಿದ್ದಾರೆ.

ಗುರುವಾರ ಕೇವಲ 59 ನಿಮಿಷಗಳಲ್ಲಿ ಕೊನೆಗೊಂಡಿರುವ ತನ್ನ 2ನೇ ಸುತ್ತಿನ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಶ್ರೀಕಾಂತ್ ಐರ್‌ಲ್ಯಾಂಡ್‌ನ ಗುಯೆನ್‌ ರನ್ನು 23-21, 21-17 ಗೇಮ್‌ ಗಳ ಅಂತರದಿಂದ ಮಣಿಸಿದರು.

ದೀರ್ಘ ಸಮಯದಿಂದ ಕಳಪೆ ಫಾರ್ಮ್‌ ನಲ್ಲಿರುವ ಕಾರಣ ವಿಶ್ವ ರ‍್ಯಾಂಕಿಂಗ್‌ ನಲ್ಲಿ ಸದ್ಯ 65ನೇ ಸ್ಥಾನದಲ್ಲಿರುವ ಶ್ರೀಕಾಂತ್ ಅಂತಿಮ-8ರ ಘಟ್ಟದಲ್ಲಿ ಫ್ರಾನ್ಸ್ ಆಟಗಾರ ಟೋಮಾ ಜೂನಿಯರ್ ಪೊಪೋವ್‌ ರನ್ನು ಎದುರಿಸಲಿದ್ದಾರೆ.

ಭಾರತದ ಇನ್ನೋರ್ವ ಆಟಗಾರ ಆಯುಷ್ ಶೆಟ್ಟಿ ಅವರನ್ನು 21-13, 21-17 ನೇರ ಗೇಮ್‌ ಗಳ ಅಂತರದಿಂದ ಮಣಿಸಿದ ಪೋಪೊವ್ ಕ್ವಾರ್ಟರ್ ಫೈನಲ್‌ ಗೆ ಪ್ರವೇಶಿಸಿದ್ದಾರೆ.

ಸತೀಶ್ ಕರುಣಾಕರನ್ ಅವರು ಟಾಮ್ ಅವರ ಸಹೋದರ ಹಾಗೂ ಡಬಲ್ಸ್ ಪಾರ್ಟ್ನರ್ ಕ್ರಿಸ್ಟೊ ಪೊಪೋವ್ ಎದುರು 14-21, 16-21 ನೇರ ಸೆಟ್‌ಗಳಿಂದ ಸೋಲನುಭವಿಸಿ ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ.

ಮಿಕ್ಸೆಡ್ ಡಬಲ್ಸ್ ಪಂದ್ಯದಲ್ಲಿ ಫ್ರಾನ್ಸ್‌ನ ಲಿಯ ಪಾಲೆರ್ಮೊ ಹಾಗೂ ಜುಲಿಯನ್ ಮೈಯೊ ವಿರುದ್ಧ 21-17, 18-21, 21-15 ಗೇಮ್‌ ಗಳ ಅಂತರದಿಂದ ವೀರೋಚಿತ ಗೆಲುವು ದಾಖಲಿಸಿರುವ ತನಿಷಾ ಕ್ರಾಸ್ಟೊ ಹಾಗೂ ಧ್ರುವ್ ಕಪಿಲಾ ಕ್ವಾರ್ಟರ್ ಫೈನಲ್‌ ಗೆ ತಲುಪಿದ್ದಾರೆ.

ಕ್ರಾಸ್ಟೊ ಹಾಗೂ ಕಪಿಲಾ ಮುಂದಿನ ಸುತ್ತಿನಲ್ಲಿ ಚೈನೀಸ್ ತೈಪೆಯ ಝೆನ್ ಬಾಂಗ್ ಹಾಗೂ ವೀ ಯಾ ಕ್ಸಿನ್‌ ರನ್ನು ಎದುರಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News