ಮಾಸ್ಟರ್ಸ್ ಲೀಗ್ ಗೆ ಭಾರತ ತಂಡ ಪ್ರಕಟ
PC : X
ಮುಂಬೈ : ಫೆ.22 ರಿಂದ ಆರಂಭವಾಗಲಿರುವ ಮಾಜಿ ಕ್ರಿಕೆಟರುಗಳ ಇಂಟರ್ ನ್ಯಾ ಷನಲ್ ಮಾಸ್ಟರ್ಸ್ ಲೀಗ್ ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ.
ಇಂಡಿಯಾ ಮಾಸ್ಟರ್ಸ್ ಹೆಸರಿನಲ್ಲಿ ಕಣಕ್ಕಿಳಿಯಲಿರುವ 15 ಸದಸ್ಯರ ಈ ತಂಡವನ್ನು ಸಚಿನ್ ತೆಂಡೂಲ್ಕರ್ ಮುನ್ನಡೆಸಲಿದ್ದಾರೆ. ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ ಆಟಗಾರರು ಮಾತ್ರ ಮಾಸ್ಟರ್ಸ್ ಲೀಗ್ ತಂಡದಲ್ಲಿದ್ದಾರೆ.
ಫೆ.22 ರಿಂದ ಮಾ.16ರವರೆಗೆ ಈ ಟೂರ್ನಿಯು ನಡೆಯಲಿದ್ದು, ಮುಂಬೈ, ವಡೋದರಾ ಮತ್ತು ರಾಯಪುರದಲ್ಲಿ ಪಂದ್ಯಗಳು ನಡೆಯಲಿವೆ.
ಇಂಟರ್ ನ್ಯಾಷನಲ್ ಮಾಸ್ಟರ್ಸ್ ಲೀಗ್ ಎಂಬುದು ಮಾಜಿ ಕ್ರಿಕೆಟರುಗಳ ಟಿ20 ಲೀಗ್ ಆಗಿದ್ದು, ಈ ಟೂರ್ನಿಯಲ್ಲಿ ಭಾರತ, ಶ್ರೀಲಂಕಾ, ವೆಸ್ಟ್ ಇಂಡೀಸ್, ಸೌತ್ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳ ಮಾಜಿ ಆಟಗಾರರು ಪಾಲ್ಗೊಳ್ಳಲಿದ್ದಾರೆ.
ಇಂಟರ್ ನ್ಯಾಷನಲ್ ಮಾಸ್ಟರ್ಸ್ ಲೀಗ್ ಗೆ ಭಾರತ ತಂಡ :
ಸಚಿನ್ ತೆಂಡೂಲ್ಕರ್ (ನಾಯಕ), ಯುವರಾಜ್ ಸಿಂಗ್, ಸುರೇಶ್ ರೈನಾ, ಅಂಬಾಟಿ ರಾಯುಡು, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ಸ್ಟುವರ್ಟ್ ಬಿನ್ನಿ, ಧವಳ್ ಕುಲಕರ್ಣಿ, ವಿನಯ್ ಕುಮಾರ್, ಶಹಬಾಝ್ ನದೀಮ್, ರಾಹುಲ್ ಶರ್ಮಾ, ಗುರುಕೀರತ್ ಸಿಂಗ್ ಮಾನ್, ಅಭಿಮನ್ಯು ಮಿಥುನ್, ಪವನ್ ನೇಗಿ, ನಮನ್ ಓಜಾ.
ಮಾಸ್ಟರ್ಸ್ ಲೀಗ್ನಲ್ಲಿ ಆಡಲಿರುವ ತಂಡಗಳು:
ಇಂಡಿಯಾ ಮಾಸ್ಟರ್ಸ್, ಶ್ರೀಲಂಕಾ ಮಾಸ್ಟರ್ಸ್, ವೆಸ್ಟ್ ಇಂಡೀಸ್ ಮಾಸ್ಟರ್ಸ್, ಆಸ್ಟ್ರೇಲಿಯಾ ಮಾಸ್ಟರ್ಸ್, ಸೌತ್ ಆಫ್ರಿಕಾ ಮಾಸ್ಟರ್ಸ್, ಇಂಗ್ಲೆಂಡ್ ಮಾಸ್ಟರ್ಸ್.