×
Ad

ದಿಲ್ಲಿ ಅರೆ ಮ್ಯಾರಥಾನ್ 2025 | ಕೆನ್ಯದ ಮಟಾಟ, ರೆಂಗರುಕ್ ಗೆ ಪ್ರಶಸ್ತಿ

Update: 2025-10-12 22:16 IST

Photo Credit: SHIV KUMAR PUSHPAKAR / thehindu

ಹೊಸದಿಲ್ಲಿ, ಅ. 12: ರವಿವಾರ ನಡೆದ ದಿಲ್ಲಿ ಅರೆ ಮ್ಯಾರಥಾನ್ನಲ್ಲಿ ಕೆನ್ಯದ ಅಲೆಕ್ಸ್ ಮಟಾಟ ಮತ್ತು ಲಿಲಿಯನ್ ಕಸಾಲ್ಟ್ ರೆಂಗರುಕ್ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಎಲಿಟ್ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಕಳೆದ ವರ್ಷ ಇಲ್ಲಿ ರನ್ನರ್ಸ್-ಅಪ್ ಆಗಿದ್ದ ಮಟಾಟ ಈ ಬಾರಿ 59 ನಿಮಿಷ 50 ಸೆಕೆಂಡ್ಗಳಲ್ಲಿ ಗುರಿ ತಲುಪಿದರು. ಅದೇ ವೇಳೆ, ಮಹಿಳೆಯರ ವಿಭಾಗದಲ್ಲಿ ರೆಂಗರುಕ್ ಒಂದು ಗಂಟೆ 7 ನಿಮಿಷ 20 ಸೆಕೆಂಡ್ನಲ್ಲಿ ಸ್ಪರ್ಧೆಯನ್ನು ಮುಗಿಸಿದರು. ಅವರಿಗೆ ತಲಾ 27,000 ಡಾಲರ್ (ಸುಮಾರು 23.95 ಲಕ್ಷ ರೂಪಾಯಿ) ನಗದು ಬಹುಮಾನ ನೀಡಲಾಯಿತು.

ಅವರನ್ನು ಮುಕ್ತಾಯ ಗೆರೆಯಲ್ಲಿ ಈ ಕ್ರೀಡಾಕೂಟದ ರಾಯಭಾರಿ ಹಾಗೂ ಒಂಭತ್ತು ಒಲಿಂಪಿಕ್ ಚಿನ್ನ ವಿಜೇತ ದಂತಕತೆ ಅತ್ಲೀಟ್ ಕಾರ್ಲ್ ಲೂಯಿಸ್ ಸ್ವಾಗತಿಸಿದರು.

ಅರೆ ಮ್ಯಾರಥಾನ್, ಓಪನ್ 10,000, ಚಾಂಪಿಯನ್ಸ್ ವಿದ್ ಡಿಸೇಬಿಲಿಟಿ ರನ್, ಹಿರಿಯ ನಾಗರಿಕರ ಓಟ ಮತ್ತು ಗ್ರೇಟ್ ಡೆಲ್ಲಿ ರನ್ ಮುಂತಾದ ವಿವಿಧ ವಿಭಾಗಗಳಲ್ಲಿ 40,000ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News