×
Ad

ನಾಯಕನಾಗಿ ಏಶ್ಯ ಕಪ್‌ನಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಎಂ.ಎಸ್.ಧೋನಿ

Update: 2025-09-10 21:18 IST

ಎಂ.ಎಸ್.ಧೋನಿ |PTI

ಹೊಸದಿಲ್ಲಿ, ಸೆ.10: ಲೆಜೆಂಡರಿ ನಾಯಕರಿಂದಾಗಿಯೇ ಭಾರತ ಕ್ರಿಕೆಟ್ ತಂಡವು ಏಶ್ಯ ಕಪ್ ಟೂರ್ನಿಯಲ್ಲಿ ಪ್ರಾಬಲ್ಯ ಸಾಧಿಸುತ್ತಾ ಬಂದಿದೆ. ಮಹೇಂದ್ರ ಸಿಂಗ್ ಧೋನಿ ಏಕದಿನ ಹಾಗೂ ಟಿ-20 ಮಾದರಿ ಎರಡರಲ್ಲೂ ಏಶ್ಯಕಪ್ ಟ್ರೋಫಿ ಜಯಿಸಿರುವ ಏಕೈಕ ನಾಯಕನಾಗಿ ವಿಶಿಷ್ಟ ಸಾಧನೆ ಮಾಡಿದ್ದಾರೆ.

ಧೋನಿ ನಾಯಕತ್ವದಲ್ಲಿ ಭಾರತ ತಂಡವು 2010ರ ಆವೃತ್ತಿಯ ಏಕದಿನ ಏಶ್ಯ ಕಪ್ ಟೂರ್ನಿಯ ಫೈನಲ್‌ನಲ್ಲಿ ಶ್ರೀಲಂಕಾ ತಂಡವನ್ನು 81 ರನ್ ಗಳಿಂದ ಸೋಲಿಸಿತ್ತು. 6 ವರ್ಷಗಳ ನಂತರ 2016ರಲ್ಲಿ ಧೋನಿ ನಾಯಕತ್ವದಲ್ಲೇ ಭಾರತವು ಟಿ-20 ಏಶ್ಯಕಪ್ ಪಂದ್ಯಾವಳಿಯನ್ನು ಜಯಿಸಿತ್ತು. ಫೈನಲ್‌ನಲ್ಲಿ ಬಾಂಗ್ಲಾದೇಶಕ್ಕೆ 8 ವಿಕೆಟ್‌ಗಳಿಂದ ಸೋಲುಣಿಸಿತ್ತು.

ಧೋನಿಯ ಸಾಧನೆಯು ವಿಶಿಷ್ಟವಾಗಿದೆ. ಮುಹಮ್ಮದ್ ಅಝರುದ್ದೀನ್ ಹಾಗೂ ರೋಹಿತ್ ಶರ್ಮಾ ಕೂಡ ನಾಯಕರಾಗಿ ಎರಡು ಬಾರಿ ಏಶ್ಯಕಪ್ ಗೆದ್ದಿದ್ದಾರೆ. ಆದರೆ ಎರಡೂ ಬಾರಿಯೂ 50 ಓವರ್‌ಗಳ ಏಶ್ಯಕಪ್ ಜಯಿಸಿದ್ದರು.

ರೋಹಿತ್ 2018ರಲ್ಲಿ ಭಾರತ ತಂಡವು ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 3 ವಿಕೆಟ್‌ಗಳಿಂದ ಸೋಲಿಸುವಲ್ಲಿ ನೇತೃತ್ವವಹಿಸಿದ್ದರು. ಆ ನಂತರ 2023ರ ಏಶ್ಯ ಕಪ್ ಫೈನಲ್‌ನಲ್ಲಿ ಶ್ರೀಲಂಕಾದ ವಿರುದ್ಧ 10 ವಿಕೆಟ್‌ಗಳಿಂದ ಜಯ ಸಾಧಿಸಲು ನೆರವಾಗಿದ್ದರು.

ಭಾರತ ತಂಡವು 8 ಬಾರಿ ಏಶ್ಯ ಕಪ್ ಚಾಂಪಿಯನ್ ಆಗಿ ದಾಖಲೆ ನಿರ್ಮಿಸಿದೆ. ಪಂದ್ಯಾವಳಿಯ ಇತಿಹಾಸದಲ್ಲಿ ಯಾವ ತಂಡ ಕೂಡ ಇಷ್ಟೊಂದು ಬಾರಿ ಟ್ರೋಫಿ ಜಯಿಸಿಲ್ಲ.

ಏಶ್ಯಕಪ್ ಜಯಿಸಿದ ಭಾರತದ ನಾಯಕರುಗಳೆಂದರೆ: ಸುನೀಲ್ ಗವಾಸ್ಕರ್(1984), ದಿಲಿಪ್ ವೆಂಗ್‌ಸರ್ಕಾರ್(1988), ಅಝರುದ್ದೀನ್ (1990,1995), ಧೋನಿ(2010,2016) ಹಾಗೂ ರೋಹಿತ್ (2018, 2023).

ಈ ಬಾರಿ ಭಾರತ ತಂಡದ ನೇತೃತ್ವವನ್ನು ಸೂರ್ಯಕುಮಾರ್ ಯಾದವ್ ವಹಿಸಿಕೊಂಡಿದ್ದಾರೆ. ಬಹು ನಿರೀಕ್ಷಿತ ಭಾರತ-ಪಾಕಿಸ್ತಾನ ನಡುವಿನ ಏಶ್ಯಕಪ್ ಪಂದ್ಯವು ಸೆ.14ರಂದು ದುಬೈನಲ್ಲಿ ನಡೆಯಲಿದೆ. ಭಾರತ ತಂಡವು ಅಬುಧಾಬಿಯಲ್ಲಿ ಸೆ.19ರಂದು ಒಮಾನ್ ವಿರುದ್ಧ್ದ ತನ್ನ ಕೊನೆಯ ಗ್ರೂಪ್ ಪಂದ್ಯವನ್ನು ಆಡಲಿದೆ.

► ಅತ್ಯಂತ ಹೆಚ್ಚು ಬಾರಿ ಏಶ್ಯ ಕಪ್ ಗೆದ್ದಿರುವ ತಂಡಗಳು

ವಿನ್ನರ್        ಗೆಲುವು                    ವರ್ಷ

ಭಾರತ           8                          1984, 1988, 1990, 1995, 2010, 2016, 2018, 2023

ಶ್ರೀಲಂಕಾ      6                          1986, 1997, 2004, 2008, 2014, 2022

ಪಾಕಿಸ್ತಾನ    2                            2000, 2012

► ಏಶ್ಯ ಕಪ್ ವಿನ್ನರ್‌ಗಳು,ರನ್ನರ್ಸ್‌ಗಳ ಪಟ್ಟಿ

ಆವೃತ್ತಿ        ವರ್ಷ         ವಿನ್ನರ್ ರನ್ನರ್-ಅಪ್ ಆತಿಥೇಯ          ದೇಶ

1                  1984            ಭಾರತ ಶ್ರೀಲಂಕಾ                              ಯುಎಇ

2                  1986             ಶ್ರೀಲಂಕಾ ಪಾಕಿಸ್ತಾನ                     ಶ್ರೀಲಂಕಾ

3                 1988             ಭಾರತ ಶ್ರೀಲಂಕಾ                     ಬಾಂಗ್ಲಾದೇಶ

4                 1990             ಭಾರತ ಶ್ರೀಲಂಕಾ                     ಭಾರತ

5                 1995             ಭಾರತ ಶ್ರೀಲಂಕಾ                      ಯುಎಇ

6                 1997             ಶ್ರೀಲಂಕಾ ಭಾರತ                     ಶ್ರೀಲಂಕಾ

7                2000             ಪಾಕಿಸ್ತಾನ ಶ್ರೀಲಂಕಾ                  ಬಾಂಗ್ಲಾದೇಶ

8                2004               ಶ್ರೀಲಂಕಾ ಭಾರತ                     ಶ್ರೀಲಂಕಾ

9                 2008                 ಶ್ರೀಲಂಕಾ ಭಾರತ                  ಪಾಕಿಸ್ತಾನ

10             2010             ಭಾರತ ಶ್ರೀಲಂಕಾ                      ಶ್ರೀಲಂಕಾ

11             2012                 ಪಾಕಿಸ್ತಾನ ಬಾಂಗ್ಲಾದೇಶ             ಬಾಂಗ್ಲಾದೇಶ

12             2014                 ಶ್ರೀಲಂಕಾ ಪಾಕಿಸ್ತಾನ                 ಬಾಂಗ್ಲಾದೇಶ

13             2016                 ಭಾರತ ಬಾಂಗ್ಲಾದೇಶ                 ಬಾಂಗ್ಲಾದೇಶ

14             2018             ಭಾರತ ಬಾಂಗ್ಲಾದೇಶ                     ಯುಎಇ

15             2022             ಶ್ರೀಲಂಕಾ ಪಾಕಿಸ್ತಾನ                     ಶ್ರೀಲಂಕಾ

16             2023             ಭಾರತ ಶ್ರೀಲಂಕಾ                  ಶ್ರೀಲಂಕಾ/ಪಾಕಿಸ್ತಾನ

17              2025                     - -                                         ಯುಎಇ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News