×
Ad

ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಕ್ಕೆ ಮುಹಮ್ಮದ್ ಶಮಿ ಅಲಭ್ಯ?

Update: 2024-01-08 22:40 IST

ಮುಹಮ್ಮದ್ ಶಮಿ | Photo: PTI 

ಹೊಸದಿಲ್ಲಿ: ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿ ಜನವರಿ 25ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯಿದೆ.

ಕಾಲುನೋವಿನಿಂದ ಬಳಲುತ್ತಿರುವ ಶಮಿ ಇನ್ನೂ ಬೌಲಿಂಗ್ ಅಭ್ಯಾಸವನ್ನು ಆರಂಭಿಸಿಲ್ಲ. ಶಮಿ ಟೆಸ್ಟ್ ಸರಣಿಯಲ್ಲಿ ಭಾಗವಹಿಸುವುದು ಅವರು ಚಿಕಿತ್ಸೆಯಿಂದ ಚೇತರಿಸಿಕೊಳ್ಳುವುದನ್ನು ಅವಲಂಬಿಸಿದೆ. ಶಮಿ ಇನ್ನಷ್ಟೇ ತನ್ನ ಫಿಟ್ನೆಸ್ ಅನ್ನು ಸಾಬೀತುಪಡಿಸಬೇಕಾಗಿದೆ.

ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಾರ, ಶಮಿ ಇನ್ನೂ ಬೌಲಿಂಗ್ ಮಾಡಲು ಆರಂಭಿಸಿಲ್ಲ. ಅವರು ತಮ್ಮ ಫಿಟ್ನೆಸ್ ಪಡೆಯಲು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ(ಎನ್ ಸಿ ಎ) ತೆರಳಬೇಕಾದ ಅಗತ್ಯವಿದೆ.

33ರ ಹರೆಯದ ವೇಗದ ಬೌಲರ್ ಶಮಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ತಂಡಕ್ಕೆ ಸೇರ್ಪಡೆಯಾಗಿದ್ದರು. ಆದರೆ ಫಿಟ್ನೆಸ್ ವಿಚಾರಕ್ಕೆ ಸಂಬಂಧಿಸಿ ಬಿಸಿಸಿಐ ವೈದ್ಯಕೀಯ ತಂಡ ಅವರಿಗೆ ಆಡಲು ಅನುಮತಿ ನಿರಾಕರಿಸಿತು.

ಸಹ ವೇಗದ ಬೌಲರ್‌ ಗಳಾದ ಮುಹಮ್ಮದ್ ಸಿರಾಜ್ ಹಾಗೂ ಜಸ್ಟ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಲಭ್ಯವಿರುವ ಕಾರಣ ಬಿಸಿಸಿಐ ಶಮಿ ಅವರ ಪುನರಾಗಮನಕ್ಕೆ ಅವಸರ ಮಾಡದಿರಲು ನಿರ್ಧರಿಸಿದೆ.

ಸ್ವದೇಶದ ವಾತಾವರಣದಲ್ಲಿ ಸ್ಪಿನ್ ಬೌಲರ್‌ ಗಳು ಪ್ರಮುಖ ಪಾತ್ರವಹಿಸುವ ನಿರೀಕ್ಷೆ ಇದೆ. ಹೀಗಾಗಿ ಟೀಮ್ ಮ್ಯಾನೇಜ್ಮೆಂಟ್ ಶಮಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಕುರಿತಂತೆ ಅವಸರಪಡುವ ಸಾಧ್ಯತೆ ಕಡಿಮೆ ಇದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News