ಭಾರತ ಏಶ್ಯಕಪ್ ಜಯಿಸಿದರೆ ಮುಹ್ಸಿನ್ ನಖ್ವಿಯಿಂದ ಪ್ರಶಸ್ತಿ ಸ್ವೀಕರಿಸುವುದಿಲ್ಲ: ವರದಿ
Update: 2025-09-15 22:46 IST
PC : X/@thenewsdrum
ಹೊಸದಿಲ್ಲಿ, ಸೆ.15: ಭಾರತೀಯ ಕ್ರಿಕೆಟ್ ತಂಡವು ಒಂದು ವೇಳೆ ಏಶ್ಯಕಪ್ ಫೈನಲ್ ಗೆ ಪ್ರವೇಶಿಸಿ ಪಂದ್ಯಾವಳಿಯಲ್ಲಿ ಜಯಶಾಲಿಯಾದರೆ ಏಶ್ಯನ್ ಕ್ರಿಕೆಟ್ ಮಂಡಳಿಯ(ಎಸಿಸಿ)ಅಧ್ಯಕ್ಷ ಮುಹ್ಸಿನ್ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸದೇ ಇರಲು ನಿರ್ಧರಿಸಿದೆ ಎಂದು ವರದಿಯಾಗಿದೆ.
ಏಶ್ಯಕಪ್ ಟೂರ್ನಿಯ ಫೈನಲ್ ಪಂದ್ಯವು ಸೆ.28ರಂದು ದುಬೈನಲ್ಲಿ ನಡೆಯಲಿದೆ.
ಎಸಿಸಿ ಅಧ್ಯಕ್ಷರಾಗಿರುವ ನಖ್ವಿ ಅವರು ಸೆ.28ರಂದು ಪಂದ್ಯಾವಳಿಯ ಫೈನಲ್ ನಂತರ ವಿಜೇತ ತಂಡಕ್ಕೆ ಟ್ರೋಫಿ ಹಸ್ತಾಂತರಿಸುವ ನಿರೀಕ್ಷೆ ಇದೆ. ಭಾರತ ತಂಡವು ಫೈನಲ್ ನಲ್ಲಿ ಗೆದ್ದರೆ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸುವ ಸಾಧ್ಯತೆ ಇಲ್ಲ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ನಖ್ವಿ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರೂ ಆಗಿದ್ದಾರೆ.