ಮುಸೆಟ್ಟಿ ಗೆ ಸೋಲುಣಿಸಿ ವಿಂಬಲ್ಡನ್ ಫೈನಲ್ ಪ್ರವೇಶಿಸಿದ ಜೊಕೊವಿಕ್
PC: x.com/espn
ವಿಂಬಲ್ಡನ್: ಆಧುನಿಕ ಟೆನಿಸ್ ಯುಗದ ಅತ್ಯಂತ ಯಶಸ್ವಿ ಆಟಗಾರ ಎನಿಸಿರುವ ನೊವಾಕ್ ಜೊಕೋವಿಕ್ ಅವರು ನೇ ಮೂರು ಸೆಟ್ ಗಳ ಹೋರಾಟದಲ್ಲಿ ಲೊರೆನ್ಸೊ ಮುಸೆಟ್ಟಿಯವರ ಸವಾಲನ್ನು ಬದಿಗೊತ್ತಿ ಪ್ರತಿಷ್ಠಿತ ವಿಂಬಲ್ಡನ್ ಟೂರ್ನಿಯ ಫೈನಲ್ ತಲುಪಿದ್ದಾರೆ.
ನೀರಸ ಆರಂಭ ಪ್ರದರ್ಶಿಸಿದ ಜೊಕೊವಿಕ್, ಬಳಿಕ ಆಟದ ಲಯ ಕಂಡುಕೊಂಡು ಉತ್ತಮ ಪ್ರದರ್ಶನ ನೀಡಿದರು. ಮೊದಲ ಸೆಟ್ನ ಆರಂಭದಲ್ಲಿ ಸರ್ವ್ ಕಳೆದುಕೊಂಡ ಸೈಬೀರಿಯನ್ ಆಟಗಾರ, ಪುಟಿದೆದ್ದು ಇಟೆಲಿಯ ಆಟಗಾರನ ವಿರುದ್ಧ ನೇರ ಸೆಟ್ ಗಳ ಜಯ ಸಾಧಿಸಿದರು. ಫೈನಲ್ ನಲ್ಲಿ ಜೊಕೊವಿಕ್ ಅವರು ಕಾರ್ಲೋಸ್ ಅಲ್ಕರಾಝ್ ವಿರುದ್ಧ ಭಾನುವಾರ ಸೆಣೆಸಲಿದ್ದಾರೆ. ಅಲ್ಕರಾಝ್ ಅವರು ರಷ್ಯಾದ ಡೇನಿಯನ್ ಮೆಡ್ವೆಡೇವ್ ವಿರುದ್ಧ ನಾಲ್ಕು ಸೆಟ್ ಗಳ ಹೋರಾಟದಲ್ಲಿ ಗೆದ್ದು ಫೈನಲ್ ತಲುಪಿದ್ದರು.
ಮೊಣಕಾಲು ಶಸ್ತ್ರಚಿಕಿತ್ಸೆ ನಡೆದ ಐದೇ ವಾರಗಳಲ್ಲಿ ಏಳು ಬಾರಿಯ ವಿಂಬಲ್ಡನ್ ಚಾಂಪಿಯನ್ ಜೊಕೊವಿಕ್, 6-4, 7-6 (7/2), 6-4 ನೇರ ಸೆಟ್ ಗಳ ಜಯದೊಂದಿಗೆ ಆಲ್ ಇಂಗ್ಲೆಂಡ್ ಕ್ಲಬ್ ನಲ್ಲಿ 10ನೇ ಬಾರಿಗೆ ಫೈನಲ್ ಪ್ರವೇಶಿಸಿದರು.
ಫೈನಲ್ ನಲ್ಲಿ ಕಳೆದ ವರ್ಷದ ವಿಂಬಲ್ಡನ್ ಸೋಲಿನ ಸೇಡು ತೀರಿಸಿಕೊಳ್ಳುವಲ್ಲಿ ಜೊಕೊವಿಕ್ ಯಶಸ್ವಿಯಾದರೆ, ರೋಜರ್ ಫೆಡರರ್ ಅವರ ಎಂಟು ವಿಂಬಲ್ಡನ್ ಪ್ರಶಸ್ತಿಯ ದಾಖಲೆ ಸರಿಗಟ್ಟಲಿದ್ದಾರೆ. 37 ವರ್ಷ ವಯಸ್ಸಿನ ಜೋಕೊವಿಕ್ ಕಳೆದ ಬಾರಿ ವಿಂಬಲ್ಡನ್ ಫೈನಲ್ ನಲ್ಲಿ ಅಲ್ಕರಾಝ್ ವಿರುದ್ದ ಐದು ಸೆಟ್ ಗಳ ಹೋರಾಟದಲ್ಲಿ ನಾಟಕೀಯ ಸೋಶಲು ಕಂಡಿದ್ದರು.
ಫ್ರೆಂಚ್ ಓಪನ್ ನ ಮೂರನೇ ಸುತ್ತಿನಲ್ಲಿ ಮುಸೆಟ್ಟಿ ವಿರುದ್ಧ ಗೆದ್ದಿದ್ದ ಸೆರ್ಬ್ ಆಟಗಾರನಿಗೆ ಶುಕ್ರವಾರದ ಪಂದ್ಯದಲ್ಲಿ ಹೆಚ್ಚಿನ ಪ್ರತಿರೋಧ ಕಂಡುಬರಲಿಲ್ಲ. ಈ ಮೂಲಕ ಜೋಕೊವಿಕ್ 37ನೇ ಗ್ಲ್ಯಾಂಡ್ ಸ್ಲಾಂ ಫೈನಲ್ ತಲುಪಿದರು. ಗ್ರ್ಯಾಂಡ್ ಸ್ಲಾಂನಲ್ಲಿ 49ನೇ ಸೆಮಿಫೈನಲ್ ಆಡುತ್ತಿರುವ ಜೊಕೊವಿಕ್ ಗೆ 22 ವರ್ಷ ವಯಸ್ಸಿನ ಮೊದಲ ಸೆಮಿಫೈನಲ್ ಆಡುತ್ತಿರುವ ಮುಸೆಟ್ಟಿ ಸವಾಲಾಗಲಿಲ್ಲ.