×
Ad

ಇಂಗ್ಲೆಂಡ್ ನಲ್ಲಿ ಏಕದಿನ ಕಪ್ ಟೂರ್ನಮೆಂಟ್: ದ್ವಿಶತಕ ಸಿಡಿಸಿದ ಮೊದಲ ಭಾರತೀಯ ಪೃಥ್ವಿ ಶಾ

Update: 2023-08-10 10:16 IST

Photo: Twitter@BCCI

ಲಂಡನ್: ಪೃಥ್ವಿ ಶಾ ತನ್ನ ಮನಸ್ಸಿನಲ್ಲಿ ಗುರಿ ಇಟ್ಟುಕೊಂಡು ಏಕದಿನ ಕಪ್ ಗಾಗಿ ಇಂಗ್ಲೆಂಡ್ ಕಡಲತೀರಕ್ಕೆ ಬಂದಿಳಿದಿದ್ದರು ಕಳೆದ ಕೆಲವು ತಿಂಗಳುಗಳಲ್ಲಿ ಗಾಯದ ಸಮಸ್ಯೆ ಹಾಗೂ ಮೈದಾನದ ಹೊರಗಿನ ವಿವಾದಗಳು ಶಾ ಅವರನ್ನು ಕಂಗೆಡಿಸಿತ್ತು.. 2018 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಶತಕದೊಂದಿಗೆ ಆರಂಭವಾದ ಶಾ ಅವರ ಅಂತರರಾಷ್ಟ್ರೀಯ ವೃತ್ತಿಜೀವನವು ಕ್ರಮೇಣ ಕುಗ್ಗಿದಂತೆ ಕಂಡುಬಂದಿತ್ತು. ಆದಾಗ್ಯೂ ಬುಧವಾರ, ಶಾ ಅವರು ತನ್ನಲ್ಲಿನ್ನೂ ಶಕ್ತಿ ಇದೆ ಎಂದು ತೋರಿಸಿಕೊಟ್ಟಿದ್ದಾರೆ.

ಬುಧವಾರ ಸೋಮರ್ ಸೆಟ್ ವಿರುದ್ಧ ಇಂಗ್ಲೆಂಡ್ನ ಏಕದಿನ ಕಪ್ ಪಂದ್ಯಾವಳಿಯಲ್ಲಿ ನಾರ್ಥಾಂಪ್ಟನ್ಶೈರ್ ಪರ ಆಡಿದ ಶಾ 153 ಎಸೆತಗಳಲ್ಲಿ 244 ರನ್ ಗಳಿಸಿದರು. ಈ ಮೂಲಕ ಶಾ ಸ್ಪರ್ಧೆಯಲ್ಲಿ ದ್ವಿಶತಕ ಬಾರಿಸಿದ ಮೊದಲ ಭಾರತೀಯ ಎನಿಸಿಕೊಂಡರು. 23 ವರ್ಷದ ಆಟಗಾರ ಶಾ ಅವರು ಚೇತೇಶ್ವರ ಪೂಜಾರ ನಂತರ ಟೂರ್ನಿಯಲ್ಲಿ 150 ಪ್ಲಸ್ ಸ್ಕೋರ್ ದಾಖಲಿಸಿದ ಎರಡನೇ ಭಾರತೀಯರಾಗಿದ್ದಾರೆ. ಶಾ 81 ಎಸೆತಗಳಲ್ಲಿ 100 ರನ್ಗಳ ಗಡಿ ತಲುಪಿದರೆ, 129 ಎಸೆತಗಳಲ್ಲಿ 200 ರನ್ಗಳ ಗಡಿ ತಲುಪಿದರು.

ತನ್ನ ಮೊದಲ ಕೌಂಟಿ ಪಂದ್ಯವನ್ನು ಆಡುತ್ತಿರುವ ಮುಂಬೈ ಬ್ಯಾಟರ್ ಶಾ ತನ್ನ ಎರಡನೇ ಲಿಸ್ಟ್ ಎ ದ್ವಿಶತಕದ ಹಾದಿಯಲ್ಲಿ 28 ಬೌಂಡರಿ ಮತ್ತು 11 ಸಿಕ್ಸರ್ಗಳನ್ನು ಸಿಡಿಸಿದರು. ಇದು ಅವರ ಒಂಬತ್ತನೇ ಲಿಸ್ಟ್ ಎ ಶತಕವಾಗಿದೆ, ಮತ್ತು ವಿಜಯ್ ಹಝಾರೆ ಟ್ರೋಫಿ ಸೆಮಿಫೈನಲ್ನಲ್ಲಿ ಅವರು 2020-21ರಲ್ಲಿ ಕರ್ನಾಟಕ ವಿರುದ್ಧ 165 ರನ್ ಗಳಿಸಿದ ನಂತರ ಇದು ಮೊದಲ ಶತಕವಾಗಿದೆ.

ನಾರ್ಥಾಂಪ್ಟನ್ಶೈರ್ ಗಾಗಿ ತನ್ನ ಮೂರನೇ ಪಂದ್ಯವನ್ನು ಆಡುತ್ತಿರುವ ಶಾ 81 ಎಸೆತಗಳಲ್ಲಿ ಕೌಂಟಿ ತಂಡದ ಪರ ತನ್ನ ಚೊಚ್ಚಲ ಶತಕವನ್ನು ತಲುಪಿದರು. ನಂತರ ಅವರು ಕೇವಲ 129 ಎಸೆತಗಳಲ್ಲಿ 24 ಬೌಂಡರಿಗಳು ಹಾಗು ಎಂಟು ಸಿಕ್ಸರ್ಗಳ ಸಹಾಯದಿಂದ 200 ರನ್ ಗಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News