×
Ad

ಒಲಿಂಪಿಕ್ಸ್ | ವಿಶೇಷ ಡೂಡಲ್ ಮೂಲಕ ಸಂಭ್ರಮಿಸಿದ ಗೂಗಲ್

Update: 2024-07-26 22:07 IST

ಹೊಸದಿಲ್ಲಿ : ಬೆಳಕಿನ ನಗರಿ ಪ್ಯಾರಿಸ್ 33ನೇ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಸಂಪೂರ್ಣ ಸಜ್ಜಾಗಿದೆ. ಬಹು ನಿರೀಕ್ಷಿತ ಈ ಕ್ರೀಡಾ ಹಬ್ಬವನ್ನು ಗೂಗಲ್ ವಿಶೇಷ ಡೂಡಲ್ ಮೂಲಕ ಸಂಭ್ರಮಿಸಿದೆ.

ಸೀನ್ ನದಿಯ ಮೇಲೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಅದರಂತೆ ಗೂಗಲ್ ನದಿಯ ವಿನ್ಯಾಸದಲ್ಲಿ ಡೂಡಲ್ ಅನ್ನು ರಚಿಸಿದೆ. ಇದರ ಮೇಲೆ ಕ್ಲಿಕ್ ಮಾಡಿದರೆ, ಪ್ಯಾರಿಸ್ ಒಲಿಂಪಿಕ್ಸ್ಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಸಿಗುವಂತೆ ವಿನ್ಯಾಸಗೊಳಿಸಲಾಗಿದೆ. ಆದರೆ ಗೂಗಲ್ ಡೂಡಲ್ ಡಿಸೈನರ್ ಹೆಸರನ್ನು ಬಹಿರಂಗಪಡಿಸಲಾಗಿಲ್ಲ.

ಬರೋಬ್ಬರಿ 100 ವರ್ಷಗಳ ನಂತರ ಬೇಸಿಗೆಯ ಒಲಿಂಪಿಕ್ಸ್ ಕೂಟಕ್ಕೆ ಪ್ಯಾರಿಸ್ ವೇದಿಕೆಯಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News