×
Ad

ಒಲಿಂಪಿಕ್ಸ್ | ನೆದರ್‌ಲ್ಯಾಂಡ್ಸ್ ಹಾಕಿ ತಂಡ ಫೈನಲ್‌ಗೆ

Update: 2024-08-06 21:46 IST

PC : X 

ಪ್ಯಾರಿಸ್ : ಸ್ಪೇನ್ ವಿರುದ್ಧ 4-0 ಅಂತರದಿಂದ ಭರ್ಜರಿ ಜಯ ಸಾಧಿಸಿರುವ ನೆದರ್‌ಲ್ಯಾಂಡ್ಸ್‌ನ ಪುರುಷರ ಹಾಕಿ ತಂಡ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫೈನಲ್‌ನಲ್ಲಿ ಸ್ಥಾನ ಪಡೆದಿದೆ.

ನೆದರ್‌ಲ್ಯಾಂಡ್ಸ್ 2012ರ ನಂತರ ಮೊದಲ ಬಾರಿ ಹಾಗೂ ಒಟ್ಟಾರೆ 7ನೇ ಬಾರಿ ಫೈನಲ್‌ನಲ್ಲಿ ಕಾಣಿಸಿಕೊಂಡಿದೆ. 24 ವರ್ಷಗಳ ಚಿನ್ನದ ಪದಕದ ಬರವನ್ನು ನೀಗಿಸಿಕೊಳ್ಳುವ ವಿಶ್ವಾಸದಲ್ಲಿದೆ. 3ನೇ ಚಿನ್ನದ ಪದಕಕ್ಕಾಗಿ ಪ್ರಯತ್ನಿಸಲಿದೆ.

ಡಚ್ ತಂಡ ಸೆಮಿ ಫೈನಲ್ ಪಂದ್ಯದುದ್ದಕ್ಕೂ ನಿಯಂತ್ರಣ ಸಾಧಿಸಿದ್ದು 12ನೇ ನಿಮಿಷದಲ್ಲಿ ಮೊದಲ ಮುನ್ನಡೆ ಪಡೆಯಿತು. ನಾಯಕ ಥಿಯೆರಿ ಬ್ರಿಂಕ್‌ಮನ್ 20ನೇ ನಿಮಿಷದಲ್ಲಿ ಮುನ್ನಡೆಯನ್ನು ದ್ವಿಗುಣಗೊಳಿಸಿದರು. 3ನೇ ಕ್ವಾರ್ಟರ್‌ನಲ್ಲಿ 3ನೇ ಗೋಲು ಗಳಿಸಿದ ಡಚ್ಚರು 50ನೇ ನಿಮಿಷದಲ್ಲಿ 4ನೇ ಗೋಲು ಗಳಿಸಿ ಪ್ರಾಬಲ್ಯ ಮೆರೆದರು.

ಡಚ್ಚರು ಫೈನಲ್‌ನಲ್ಲಿ ಭಾರತ ಇಲ್ಲವೇ ಜರ್ಮನಿ ತಂಡವನ್ನು ಎದುರಿಸಲಿದ್ದಾರೆ. ಸ್ಪೇನ್ ತಂಡವು ಕಂಚಿನ ಪದಕ ಪಂದ್ಯದತ್ತ ಗಮನ ಹರಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News