×
Ad

ನೀರಜ್ ಚೋಪ್ರಾಗೆ ಹುಟ್ಟುಹಬ್ಬದ ಶುಭಾಶಯ ಕೋರಿದ ಪಾಕಿಸ್ತಾನದ ಅರ್ಷದ್ ನದೀಮ್

Update: 2024-12-24 21:38 IST

 ನೀರಜ್ ಚೋಪ್ರಾ, ಅರ್ಷದ್ ನದೀಮ್ | PC : olympics.com

ಹೊಸದಿಲ್ಲಿ : ಒಲಿಂಪಿಕ್ಸ್ ಚಾಂಪಿಯನ್ ಅರ್ಷದ್ ನದೀಮ್ ಅವರು ಮಂಗಳವಾರ ಭಾರತದ ಸ್ಟಾರ್ ಜಾವೆಲಿನ್ ಅತ್ಲೀಟ್ ನೀರಜ್ ಚೋಪ್ರಾಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಪ್ಯಾರಿಸ್ ಗೇಮ್ಸ್‌ ನಲ್ಲಿ 92.27 ಮೀ.ದೂರಕ್ಕೆ ಜಾವೆಲಿನ್ ಎಸೆದು ನೂತನ ಒಲಿಂಪಿಕ್ಸ್ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿ ಪಾಕಿಸ್ತಾನದ ಪರ ಸ್ಮರಣೀಯ ಮೈಲಿಗಲ್ಲು ಸ್ಥಾಪಿಸಿದ್ದರು.

ನನ್ನ ಸ್ನೇಹಿತ ಹಾಗೂ ಸಹ ಕ್ರೀಡಾಪಟು ನೀರಜ್ ಚೋಪ್ರಾ ಅವರಿಗೆ ಜನ್ಮದಿನದ ಶುಭಾಶಯಗಳು. ನಿಮಗೆ ಸಂತೋಷ, ಯಶಸ್ಸು, ಉತ್ತಮ ಆರೋಗ್ಯ ತುಂಬಿದ ವರ್ಷವನ್ನು ಹಾರೈಸುತ್ತೇನೆ. ನಿಮ್ಮ ಮುಂದಿನ ಜೀವನ ಅದ್ಭುತವಾಗಿರಲಿ ಎಂದು ಅರ್ಷದ್ ನದೀಮ್ ಎಕ್ಸ್‌ನಲ್ಲಿ ಬರೆದಿದ್ದಾರೆ.

ಟೋಕಿಯೊ ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಪ್ಯಾರಿಸ್‌ನಲ್ಲಿ 89.45 ಮೀ. ದೂರ ಜಾವೆಲಿನ್ ಎಸೆದು 2ನೇ ಸ್ಥಾನ ಪಡೆದರು. ಈ ಮೂಲಕ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News