×
Ad

ಔಟಾದ ಬಾಬರ್‌ಗೆ ‘‘ಬೈ ಬೈ’’ ಮಾಡಿದ ಪಾಂಡ್ಯ!

Update: 2025-02-23 22:49 IST

ಹಾರ್ದಿಕ್ ಪಾಂಡ್ಯ , ಬಾಬರ್ ಅಝಮ್ | PC :  X 

ದುಬೈ: ಕ್ರಿಕೆಟ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ತೀವ್ರ ಪೈಪೋಟಿ ದುಬೈನಲ್ಲಿ ರವಿವಾರ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಹಾರ್ದಿಕ್ ಪಾಂಡ್ಯರ ಎಸೆತದಲ್ಲಿ ಪಾಕಿಸ್ತಾನದ ಬಾಬರ್ ಅಝಮ್ ಔಟಾದಾಗ ಏರ್ಪಟ್ಟ ನಾಟಕೀಯ ಸನ್ನಿವೇಶವು ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯಿತು.    

ಟಾಸ್ ಗೆದ್ದ ಪಾಕಿಸ್ತಾನ ನಾಯಕ ಮುಹಮ್ಮದ್ ರಿಝ್ವಾನ್ ಮೊದಲು ಬ್ಯಾಟಿಂಗ್ ಮಾಡಲು ತೀರ್ಮಾನಿಸಿದ ಬಳಿಕ, ಆರಂಭಿಕ ಜೋಡಿಯಾದ ಬಾಬರ್ ಅಝಮ್ ಮತ್ತು ಇಮಾಮುಲ್ ಹಕ್ ಉತ್ತಮ ಭಾಗೀದಾರಿಕೆ ನಿಭಾಯಿಸುತ್ತಾ ಉತ್ತಮ ಆರಂಭವನ್ನು ನೀಡಿದರು. ಆದರೆ, ಪಾಂಡ್ಯರ ಬಿರುಸಿನ ಎಸೆತವು ಪಂದ್ಯದ ಗತಿಯನ್ನು ತಿರುಗಿಸಿತು.

26 ಎಸೆತಗಳಲ್ಲಿ 23 ರನ್‌ಗಳನ್ನು ಗಳಿಸಿ ನಿರಾಳವಾಗಿದ್ದಂತೆ ಕಂಡುಬಂದ ಬಾಬರ್, ಪಾಂಡ್ಯರ ಎಸೆತವನ್ನು ಕವರ್‌ನತ್ತ ಬಾರಿಸಿದರು. ಆದರೆ ಚೆಂಡು ಔಟ್‌ಸೈಡ್ ಎಡ್ಜ್ ಆಯಿತು ಮತ್ತು ಕೆ.ಎಲ್. ರಾಹುಲ್ ಮಿಂಚಿನ ವೇಗದಲ್ಲಿ ಅದನ್ನು ಹಿಡಿದರು.

ಬಾಬರ್ ಪೆವಿಲಿಯನ್‌ನತ್ತ ನಡೆಯುತ್ತಿರುವಾಗ ಪಾಂಡ್ಯ ‘‘ಬೈ ಬೈ’’ ಎನ್ನುವಂತೆ ಕೈಬೀಸಿ ತನ್ನ ಸಂಭ್ರಮವನ್ನು ಹೊರಗೆಡವಿದರು. ಪಾಂಡ್ಯರ ಈ ನಡೆಯು ಜಗತ್ತಿನದಾದ್ಯಂತ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯಿತು. ಸಾಮಾಜಿಕ ಮಾಧ್ಯಮಗಳಲ್ಲಿ ಅದಕ್ಕೆ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾದವು.

ಪಾಂಡ್ಯರ ಪ್ರತಿಕ್ರಿಯೆಯು ಉತ್ಕಟ ಕ್ರಿಕೆಟ್ ಪೈಪೋಟಿಯಿಂದ ಉದ್ಭವಿಸಿದ ಸ್ವಾಭಾವಿಕ ಪ್ರತಿಕ್ರಿಯೆ ಎಂಬುದಾಗಿ ಕೆಲವು ಅಭಿಮಾನಿಗಳು ವಿಶ್ಲೇಷಿಸಿದರು. ಅದೇ ವೇಳೆ, ಅದು ಕ್ರೀಡಾ ಮನೋಭಾವದ ವ್ಯಾಪ್ತಿಯನ್ನು ಮೀರಿತೇ ಎಂಬ ಬಗ್ಗೆಯೂ ಕೆಲವರು ಚರ್ಚಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News