ಭಾರತದ ರಾಷ್ಟ್ರೀಯ ಆಯ್ಕೆಗಾರರ ಹುದ್ದೆಯ ರೇಸ್‌ನಲ್ಲಿ ಪ್ರಜ್ಞಾನ್ ಓಜಾ, ಆರ್.ಪಿ. ಸಿಂಗ್
ಆರ್.ಪಿ. ಸಿಂಗ್ , ಪ್ರಜ್ಞಾನ್ ಓಜಾ | PTI
ಹೊಸದಿಲ್ಲಿ, ಸೆ.17: ಭಾರತದ ಮಾಜಿ ಅಂತರ್‌ರಾಷ್ಟ್ರೀಯ ಆಟಗಾರರಾದ ಪ್ರಜ್ಞಾನ್ ಓಜಾ ಹಾಗೂ ಆರ್.ಪಿ. ಸಿಂಗ್ ಅವರು ಎಸ್.ಶರತ್ ಹಾಗೂ ಸುಬ್ರೊತೊ ಬ್ಯಾನರ್ಜಿ ಅವರ ನಿರ್ಗಮನದಿಂದ ತೆರವಾಗಿರುವ ರಾಷ್ಟ್ರೀಯ ಸೀನಿಯರ್ ಆಯ್ಕೆ ಸಮಿತಿಯನ್ನು ಸೇರುವ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ.
‘ಸ್ಟಾರ್‌ಸ್ಪೋರ್ಟ್ಸ್’ ಪ್ರಕಾರ ಭಾರತದ ಮಾಜಿ ವೇಗಿ ಪ್ರವೀಣ್ ಕುಮಾರ್, ಬ್ಯಾಟರ್ ಅಮಯ್ ಖುರಾಸಿಯ, ಆಶೀಷ್ ವಿನ್‌ಸ್ಟನ್ ಹಾಗೂ ಶಕ್ತಿ ಸಿಂಗ್ ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.
ಓಜಾ ಹಾಗೂ ಆರ್.ಪಿ. ಸಿಂಗ್‌ಗೆ ಈ ಹುದ್ದೆಗೆ ಅರ್ಜಿ ಸಲ್ಲಿಸುವಂತೆ ನಿರ್ದಿಷ್ಟವಾಗಿ ತಿಳಿಸಲಾಗಿದ್ದು, ಅಶೋಕ್ ಮಲ್ಹೋತ್ರಾ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ) ಸೆ.28ರಂದು ಮುಂಬೈನಲ್ಲಿ ನಡೆಯಲಿರುವ ಬಿಸಿಸಿಐನ ಎಜಿಎಂಗಿಂತ ಮೊದಲು ಈ ಇಬ್ಬರ ಹೆಸರನ್ನು ಅಂತಿಮಗೊಳಿಸುವ ನಿರೀಕ್ಷೆ ಇದೆ.
ಶರತ್ ಅವರು ಜೂನಿಯರ್ ಆಯ್ಕೆ ಸಮಿತಿಗೆ ತಿಲಕ್ ನಾಯ್ಡು ಬದಲಿಗೆ ಆಯ್ಕೆಯಾಗಿದ್ದು, ಶರತ್ ಸ್ಥಾನಕ್ಕೆ 39ರ ಹರೆಯದ ಓಜಾ ಮುಂಚೂಣಿಯಲ್ಲಿದ್ದಾರೆ. ಎಡಗೈ ಸ್ಪಿನ್ನರ್ ಓಜಾ ಭಾರತದ ಪರ 24 ಟೆಸ್ಟ್, 18 ಏಕದಿನ ಹಗೂ 6 ಟಿ-20 ಪಂದ್ಯಗಳಣ್ನು ಆಡಿದ್ದು, ಒಟ್ಟು 144 ವಿಕೆಟ್‌ಗಳನ್ನು ಪಡೆದಿದ್ದಾರೆ.
2007ರ ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾಗಿದ್ದ ಆರ್.ಸಿ. ಸಿಂಗ್ 82 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಒಟ್ಟು 124 ವಿಕೆಟ್‌ಗಳನ್ನು ಪಡೆದಿದ್ದಾರೆ. ಟಿವಿ ವೀಕ್ಷಕವಿವರಣೆಗಾರನಾಗಿ ಕೆಲಸ ಮಾಡುವ ಮೊದಲು ಸಿಎಸಿಯಲ್ಲಿ ಕಾರ್ಯನಿರ್ವಹಿಸಿದ್ದರು.