ಒಂದೇ ಕೈಯಲ್ಲಿ ಕ್ಯಾಚ್ ಪಡೆದು ರಘುವಂಶಿ ಔಟ್ ಮಾಡಿದ ಗ್ರೀನ್
PhotoCredits: Jio Cinema Twitter
ಹೊಸದಿಲ್ಲಿ: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ರವಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಒಂದೇ ಕೈಯಲ್ಲಿ ಬ್ಯಾಟರ್ ರಘುವಂಶಿ ನೀಡಿದ ಕ್ಯಾಚ್ ಅನ್ನು ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಆಸ್ಟ್ರೇಲಿಯದ ಆಲ್ರೌಂಡರ್ ಗ್ರೀನ್ ಒಂದೇ ಕೈಯಲ್ಲಿ ಕ್ಯಾಚ್ ಪಡೆದು ಕೆಕೆಆರ್ ಬ್ಯಾಟರ್ ರಘುವಂಶಿ ಅವರನ್ನು ಪೆವಿಲಿಯನ್ಗೆ ಕಳುಹಿಸಿ ತನ್ನ ಸಹ ಆಟಗಾರರಿಗೆ ಅಚ್ಚರಿ ತಂದರಲ್ಲದೆ ನೆರೆದಿದ್ದ ಪ್ರೇಕ್ಷಕರ ಮನ ಗೆದ್ದರು.
6ನೇ ಓವರ್ನಲ್ಲಿ ಆರ್ಸಿಬಿ ಬೌಲರ್ ಯಶ್ ದಯಾಳ್ ಬೌಲಿಂಗ್ ಮಾಡಿದಾಗ ಈ ಘಟನೆ ನಡೆದಿದೆ. ದಯಾಳ್ ಎಸೆತವನ್ನು ಬಲಗೈ ಬ್ಯಾಟರ್ ರಘುವಂಶಿ ಮಿಡ್ ವಿಕೆಟ್ನತ್ತ ತಳ್ಳಿದರು. ಚೆಂಡು ಬೌಂಡರಿ ಗೆರೆ ದಾಟುವಂತೆ ಕಂಡುಬಂದಾಗ ಗ್ರೀನ್ ಆಕರ್ಷಕ ಕ್ಯಾಚ್ ಪಡೆಯುವಲ್ಲಿ ಯಶಸ್ವಿಯಾದರು.
Nothing gets past the Green machine! #KKRvRCB #TATAIPL #IPLonJioCinema pic.twitter.com/Ot6qatYtG8
— JioCinema (@JioCinema) April 21, 2024