ಪಾಕಿಸ್ತಾನ – ನ್ಯೂಝಿಲ್ಯಾಂಡ್ ಪಂದ್ಯಕ್ಕೆ ಮಳೆ ಅಡ್ಡಿ
Update: 2023-11-04 17:44 IST
ಬೆಂಗಳೂರು: ಇಲ್ಲಿನ ಎಮ್ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಾಕಿಸ್ತಾನ ಮತ್ತು ನ್ಯೂಝಿಲ್ಯಾಂಡ್ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು, ಪಂದ್ಯವು ವಿಳಂಬಗೊಂಡಿದೆ.
ನ್ಯೂಝಿಲ್ಯಾಂಡ್ ನೀಡಿದ 402 ರನ್ ಗುರಿ ಬೆನ್ನತ್ತಿದ್ದ ಪಾಕ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಪಾಕ್ ಪರ ಫಖರ್ ಜಮಾನ್ 106 ರನ್ ಗಳಿಸಿದ್ದು, ಬಾಬರ್ ಅಝಂ 47 ರನ್ ಗಳಿಸಿ ಅಜೇಯರಾಗಿದ್ದಾರೆ.
ಪಂದ್ಯದ 21.3 ನ ಟ್ರೆಂಟ್ ಬೋಲ್ಟ್ ಬೌಲಿಂಗ್ ವೇಳೆ ಮಳೆ ಕಾಣಿಸಿಕೊಂಡ ಪರಿಣಾಮ ಅಂಪಯರ್ ಪಂದ್ಯವನ್ನು ಸ್ಥಗಿತಗೊಳಿಸಿದರು.
ಪಾಕಿಸ್ತಾನ 160 ರನ್ನಿಗೆ ಒಂದು ವಿಕೆಟ್ ಕಳೆದುಕೊಂಡಿದೆ. ಗೆಲುವಿಗೆ 242 ರನ್ ಗಳ ಅಗತ್ಯವಿದೆ