ರಣಜಿ: ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 20,000 ರನ್ ಪೂರೈಸಿದ ಚೇತೇಶ್ವರ ಪೂಜಾರ
Update: 2024-01-21 23:09 IST
Photo : PTI
ಮುಂಬೈ: ಭಾರತದ ಬ್ಯಾಟರ್ ಚೇತೇಶ್ವರ ಪೂಜಾರ ವಿಸಿಎ ಸ್ಟೇಡಿಯಮ್ನಲ್ಲಿ ರವಿವಾರ ನಡೆದ ಸೌರಾಷ್ಟ್ರ ಹಾಗೂ ವಿದರ್ಭ ನಡುವಿನ ರಣಜಿ ಟ್ರೋಫಿಯ ಮೂರನೇ ಸುತ್ತಿನ ಪಂದ್ಯದಲ್ಲಿ 20,000 ಪ್ರಥಮ ದರ್ಜೆ ರನ್ ಪೂರ್ಣಗೊಳಿಸಿದರು.
35ರ ಹರೆಯದ ಪೂಜಾರ ಹರ್ಷ ದುಬೆಗೆ ವಿಕೆಟ್ ಒಪ್ಪಿಸುವ ಮೊದಲು 137 ಎಸೆತಗಳಲ್ಲಿ 66 ರನ್ ಗಳಿಸಿದರು. ವಿಶ್ವರಾಜ್ ಸಿನ್ಹ ಜಡೇಜರೊಂದಿಗೆ 87 ರನ್ ಜೊತೆಯಾಟ ನಡೆಸಿದ ಪೂಜಾರ ಸೌರಾಷ್ಟ್ರ ತಂಡ ವಿದರ್ಭ ವಿರುದ್ಧ ಮೇಲುಗೈ ಸಾಧಿಸಲು ನೆರವಾದರು.
ಜಯದೇವ್ ಉನದ್ಕಟ್ ನೇತೃತ್ವದ ಸೌರಾಷ್ಟ್ರ ತಂಡ ವಿದರ್ಭ ವಿರುದ್ಧ ಭಾರೀ ಮುನ್ನಡೆಯಲ್ಲಿದೆ.