×
Ad

WPL | ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿದ ಆರ್ ಸಿ ಬಿ

Update: 2025-02-17 22:54 IST

Photo: x/@sportstarweb

ವಡೋದರಾ : ಇಲ್ಲಿನ ಬಿಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 8 ವಿಕೆಟ್ ಗಳ ಜಯ ಸಾಧಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 142 ರನ್ ಗಳ ಗುರಿ ಬೆನ್ನತ್ತಲು ಬ್ಯಾಟಿಂಗ್ ಗೆ ಇಳಿದ ಆರ್ ಸಿ ಬಿ ತಂಡ ಉತ್ತಮ ಆರಂಭ ಪಡೆಯಿತು. ಆರಂಭಿಕರಾಗಿ ಬ್ಯಾಟಿಂಗ್ ಇಳಿದಿದ್ದ ನಾಯಕಿ ಸ್ಮೃತಿ ಮಂದಾನ ಮತ್ತು ಡ್ಯಾನಿ ವ್ಯಾಟ್-ಹಾಡ್ಜ್ ಉತ್ತಮ ಪ್ರದರ್ಶನ ನೀಡಿದರು.

ಡ್ಯಾನಿ ವ್ಯಾಟ್-ಹಾಡ್ಜ್ 10.5 ಓವರ್ ನಲ್ಲಿ 33 ಎಸೆತಗಳಲ್ಲಿ 7 ಬೌಂಡರಿ ನೆರವಿನೊಂದಿಗೆ 42 ರನ್ ಗಳನ್ನು ಬಾರಿಸಿ ಔಟಾದರೆ, ನಾಯಕಿ ಸ್ಮೃತಿ ಮಂದಾನ 46 ಎಸೆತಗಳಲ್ಲಿ 10 ಬೌಂಡರಿ, 3ಸಿಕ್ಸ್ ನೆರವಿನೊಂದಿಗೆ 81 ರನ್ ಬಾರಿಸಿ ಔಟಾದರು.

ನಂತರ ಕ್ರಮಾಂಕದಲ್ಲಿ ಬಂದ ಎಲ್ಲಿಸ್ ಪೆರ್ರಿ ಮತ್ತು ರಾಘ್ವಿ ಬಿಸ್ಟ್ ತಂಡಕ್ಕೆ ನೆರವಾದರು.

ಎಲ್ಲಿಸ್ ಪೆರ್ರಿ 13 ಎಸೆತಗಳಲ್ಲಿ 7 ರನ್ ಬಾರಿಸಿದರೆ, ಅವರಿಗೆ ಜೊತೆಯಾದ ರಾಘ್ವಿ ಬಿಸ್ಟ್ 5ಎಸೆತಗಳಲ್ಲಿ 1ಬೌಂಡರಿ,1ಸಿಕ್ಸ್ ನೆರವಿನೊಂದಿಗೆ 11 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News