ದಾಖಲೆ ಬರೆದ ಹೈದರಾಬಾದ್-ಗುಜರಾತ್ ಪಂದ್ಯ
PC ; X
ಅಹ್ಮದಾಬಾದ್: ಗುಜರಾತ್ ಟೈಟಾನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವೆ ಶುಕ್ರವಾರ ನಡೆದ ಪಂದ್ಯದಲ್ಲಿ ಮತ್ತೊಂದು ದಾಖಲೆ ನಿರ್ಮಾಣವಾಗಿದೆ. ಐಪಿಎಲ್ ಇತಿಹಾಸದಲ್ಲಿ ತಲಾ 20 ಓವರ್‌ಗಳು ಪೂರ್ಣಗೊಂಡ ಪಂದ್ಯಗಳ ಪೈಕಿ ಅತ್ಯಂತ ಕಡಿಮೆ ಡಾಟ್‌ಬಾಲ್ ಕಂಡ ಪಂದ್ಯ ಇದಾಗಿದೆ.
ಈ ಹಿಂದೆ 2024ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ 22 ಡಾಟ್‌ಬಾಲ್‌ಗಳು ಬಂದಿದ್ದವು.
ಇದೀಗ ಈ ದಾಖಲೆಯನ್ನು ಗುಜರಾತ್ ಹಾಗೂ ಹೈದರಾಬಾದ್ ತಂಡವು ಶುಕ್ರವಾರ ಸಮಬಲ ಮಾಡಿವೆ. ಶುಕ್ರವಾರ ಉಭಯ ತಂಡಗಳಿಂದ ಕೇವಲ 22 ಡಾಟ್‌ಬಾಲ್‌ಗಳು ಮಾತ್ರ ಬಂದಿದೆ.
► ಐಪಿಎಲ್ ಇನಿಂಗ್ಸ್‌ಗಳಲ್ಲಿ ಕಡಿಮೆ ಡಾಟ್ ಬಾಲ್‌ಗಳನ್ನು ಕಂಡ ಪಂದ್ಯಗಳು(ಪೂರ್ತಿ 20 ಓವರ್‌ಗಳು)
*22-ಸನ್‌ರೈಸರ್ಸ್ ಹೈದರಾಬಾದ್-ಮುಂಬೈ ಇಂಡಿಯನ್ಸ್, ಹೈದರಾಬಾದ್, 2024
*22-ಗುಜರಾತ್ ಟೈಟಾನ್ಸ್- ಸನ್‌ರೈಸರ್ಸ್ ಹೈದರಾಬಾದ್, ಅಹ್ಮದಾಬಾದ್, 2025
*23-ಡೆಲ್ಲಿ ಕ್ಯಾಪಿಟಲ್ಸ್-ಕೆಕೆಆರ್, ಶಾರ್ಜಾ, 2020
*23-ಆರ್‌ಸಿಬಿ-ಎಸ್‌ಆರ್‌ಎಚ್, ಹೈದರಾಬಾದ್, 2024
*24-ಎಸ್‌ಆರ್‌ಎಚ್-ಪಂಜಾಬ್ ಕಿಂಗ್ಸ್, ಮೊಹಾಲಿ, 2017
*24-ಗುಜರಾತ್ ಟೈಟಾನ್ಸ್-ಸಿಎಸ್‌ಕೆ, ಅಹ್ಮದಾಬಾದ್, 2024