×
Ad

ದ್ವಿತೀಯ ಟಿ20 | ಝಿಂಬಾಬ್ವೆ ವಿರುದ್ಧ ಅಭಿಷೇಕ್ ಶರ್ಮಾ ಶತಕ; ಭಾರತ 234/2

Update: 2024-07-07 18:26 IST

Photo : BCCI 

ಹರಾರೆ(ಝಿಂಬಾಬ್ವೆ) : ಇಲ್ಲಿನ ಹರಾರೆ ಸ್ಪೋರ್ಟ್ ಕ್ಲಬ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಝಿಂಬಾಬ್ವೆ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡವು ನಾಯಕ ಶುಭಮನ್ ಗಿಲ್ ಮತ್ತು ಬ್ಯಾಟರ್ ಅಭಿಷೇಕ್ ಶರ್ಮಾ ನೇತೃತ್ವದಲ್ಲಿ ಇನ್ನಿಂಗ್ಸ್ ಆರಂಭಿಸಿತು. ಎರಡನೇ ಓವರ್ ನ ಎರಡನೇ ಎಸೆತದಲ್ಲಿ ಶುಭಮನ್ ಗಿಲ್ ವಿಕೆಟ್ ಕಳೆದುಕೊಂಡಾಗ, ಅಭಿಷೇಕ್ ಶರ್ಮಾ ಭಾರತ ತಂಡದ ಪರ ರಕ್ಷಣಾತ್ಮಕ ಆಟ ಪ್ರದರ್ಶಿಸಿದರು. ತಮ್ಮ ಸ್ಪೋಟಕ ಬ್ಯಾಟಿಂಗ್ ನಿಂದ 47 ಎಸೆತಗಳಲ್ಲಿ 8 ಸಿಕ್ಸರ್ ಸಹಿತ 7 ಬೌಂಡರಿಗಳೊಂದಿಗೆ 100 ರನ್ ಬಾರಿಸಿ, ಝಿಂಬಾಬ್ವೆ ಬೌಲರ್ ಗಳ ಪಾಲಿಗೆ ಸಿಂಹಸ್ವಪ್ನವಾದರು. ಶತಕ ಬಾರಿಸಿದ ಅವರು ವೆಲ್ಲಿಂಗ್ಟನ್ ಮಸಕಡ್ಜಾ ಎಸೆತದಲ್ಲಿ ಡಿಯೋನ್ ಮೈಯರ್ಸ್ ಗೆ ಕ್ಯಾಚಿತ್ತು ನಿರ್ಗಮಿಸಿದರು.

ಅಭಿಷೇಕ್ ಶರ್ಮಾಗೆ ನೀಡಿದ ಋತುರಾಜ್ ಗಾಯಕ್ವಾಡ್ 47 ಎಸೆತಗಳಲ್ಲಿ 77 ರನ್ ಗಳಿಸಿದರು. ಅದರಲ್ಲಿ 11 ಬೌಂಡರಿ ಒಂದು ಸಿಕ್ಸರ್ ಸೇರಿತ್ತು. ಶರ್ಮಾ ಸ್ಥಾನ ತುಂಬಲು ಬಂದ ಯುವ ಬ್ಯಾಟರ್ ರಿಂಕು ಸಿಂಗ್ ಬಹಳ ದಿನಗಳ ಮತ್ತೆ ಸ್ಪೋಟಕ ಆಟವಾಡಿದರು. 22 ಎಸೆತ ಎದುರಿಸಿದ ರಿಂಕು 5 ಸಿಕ್ಸರ್ 2 ಬೌಂಡರಿ ಸಹಿತ 48 ರನ್ ಗಳಿಸಿ ಭಾರತದ ಮೊತ್ತವನ್ನು ದ್ವಿಶತಕ ದಾಟಿಸಿದರು.

ಝಿಂಬಾಬ್ವೆ ಬೌಲರ್ ಗಳನ್ನು ಬಗ್ಗುಬಡಿದ ಭಾರತ ತಂಡವು 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿ ಮೊದಲ ಇನ್ನಿಂಗ್ಸ್ ಮುಗಿಸಿತು.

ಝಿಂಬಾಬ್ವೆ ಪರ ವೆಲ್ಲಿಂಗ್ಟನ್ ಮಸಕಡ್ಜಾ, ಬ್ರಿಯಾನ್ ಬೆನೆಟ್ ತಲಾ ಒಂದು ವಿಕೆಟ್ ಪಡೆದರು. ಪಂದ್ಯ ಗೆಲ್ಲಲು ಝಿಂಬಾಬ್ವೆಗೆ 235 ರನ್ ಗಳ ಅವಶ್ಯಕತೆ ಇದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News