×
Ad

ರಿಯೋ ಓಪನ್: ಹಾಲಿ ಚಾಂಪಿಯನ್ ಕ್ಯಾಮರೂನ್ ನೋರಿ ಶುಭಾರಂಭ

Update: 2024-02-20 21:27 IST

ಕ್ಯಾಮರೂನ್ ನೋರಿ |Photo: spoogle.in

ರಿಯೊ ಡಿ ಜನೈರೊ: ಬೊಲಿವಿಯದ ಹ್ಯೂಗೊ ಡೆಲಿಯನ್ರನ್ನು ನೇರ ಸೆಟ್ಗಳ ಅಂತರದಿಂದ ಸದೆಬಡಿದ ಹಾಲಿ ಚಾಂಪಿಯನ್ ಕ್ಯಾಮರೂನ್ ನೋರಿ ರಿಯೋ ಓಪನ್ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಸೋಮವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ನೋರಿ ಅವರು ಡೆಲಿಯನ್ರನ್ನು 6-3, 6-2 ಸೆಟ್ಗಳ ಅಂತರದಿಂದ ಮಣಿಸಿದರು.

ಇದು ನನಗೆ ವಿಶೇಷ ಸ್ಥಳವಾಗಿದೆ. ಕಳೆದ ವರ್ಷ ನಾನು ಇಲ್ಲಿ ನನ್ನ ಅತಿದೊಡ್ಡ ಪ್ರಶಸ್ತಿ ಜಯಿಸಿದ್ದೆ. ನನಗೆ ಮತ್ತೊಂದು ಪ್ರಶಸ್ತಿ ಗೆಲ್ಲುವ ಅವಕಾಶವಿದ್ದು ಆ ನಿಟ್ಟಿಯಲ್ಲಿ ಪ್ರಯತ್ನಿಸುವೆ ಎಂದು ಕ್ಯಾಮರೂನ್ ನೋರಿ ಹೇಳಿದ್ದಾರೆ.

2023ರ ಫೈನಲ್ನಲ್ಲಿ ನೋರಿ ಅವರು ಸ್ಪೇನ್ನ ಕಾರ್ಲೊಸ್ ಅಲ್ಕರಾಝ್ರನ್ನು ಸೋಲಿಸಿ ಶಾಕ್ ನೀಡಿದ್ದರು.

ಎರಡನೇ ಶ್ರೇಯಾಂಕದ ನೋರೆ ಮುಂದಿನ ಸುತ್ತಿನಲ್ಲಿ ಚಿಲಿಯ ಥಾಮಸ್ ಬ್ಯಾರಿಯೋಸ್ ವೆರಾ ಅವರನ್ನು ಎದುರಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News