×
Ad

ಮೊದಲ ಟೆಸ್ಟ್ ಪಂದ್ಯದ ವೇಳೆಯೇ ಟೀಮ್ ಇಂಡಿಯಾ ಸೇರಲಿರುವ ರೋಹಿತ್ ಶರ್ಮಾ

Update: 2024-11-21 22:08 IST

ರೋಹಿತ್ ಶರ್ಮಾ | PC: PTI 

ಹೊಸದಿಲ್ಲಿ : ರೋಹಿತ್ ಶರ್ಮಾ ನ.23ರಂದು ಆಸ್ಟ್ರೇಲಿಯಕ್ಕೆ ತೆರಳಲಿದ್ದು, ಪರ್ತ್‌ನಲ್ಲಿ ಶುಕ್ರವಾರದಿಂದ ಆರಂಭವಾಗಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯದ ವೇಳೆ ತಂಡವನ್ನು ಸೇರಿಕೊಳ್ಳಲಿದ್ದಾರೆ.

ನ.10 ಹಾಗೂ 11ರಂದು ಎರಡು ಬ್ಯಾಚ್‌ಗಳಲ್ಲಿ ಆಸ್ಟ್ರೇಲಿಯಕ್ಕೆ ಪ್ರಯಾಣಿಸಿದ್ದ ಭಾರತ ಕ್ರಿಕೆಟ್ ತಂಡಗಳೊಂದಿಗೆ ನಾಯಕ ರೋಹಿತ್ ಪ್ರಯಾಣಿಸಿರಲಿಲ್ಲ. ರೋಹಿತ್ ದಂಪತಿಗೆ ಎರಡನೇ ಮಗು ಜನಿಸಿದ ನಂತರ ಅವರ ಆಸ್ಟ್ರೇಲಿಯ ಪ್ರಯಾಣವು ಸ್ಪಷ್ಟವಾಗಿತ್ತು.

ಈ ಅವಧಿಯಲ್ಲಿ ರೋಹಿತ್ ಅವರು ಮುಂಬೈನಲ್ಲಿ ಅಭ್ಯಾಸ ನಡೆಸಿದ್ದರು. ಪರ್ತ್‌ನಲ್ಲಿ ನಡೆಯಲಿರುವ ಸರಣಿಯ ಮೊದಲ ಟೆಸ್ಟ್ ಪಂದ್ಯಕ್ಕೆ ತಾನು ಲಭ್ಯವಿರುವುದಿಲ್ಲ ಎಂದು ಬಿಸಿಸಿಐಗೆ ಮಾಹಿತಿ ನೀಡಿದ್ದರು.

ರೋಹಿತ್ ತನ್ನ ತಯಾರಿಯನ್ನು ಪರ್ತ್‌ನಲ್ಲಿಯೇ ಆರಂಭಿಸಲಿದ್ದು, ಆ ನಂತರ ತನ್ನ ಗಮನವನ್ನು ಅಡಿಲೇಡ್‌ನಲ್ಲಿ ನಡೆಯುವ ಹಗಲು-ರಾತ್ರಿ ಟೆಸ್ಟ್ ಪಂದ್ಯದತ್ತ ಹರಿಸಲಿದ್ದಾರೆ. 37ರ ಹರೆಯದ ರೋಹಿತ್ ನ.30ರಂದು ಕ್ಯಾನ್‌ಬೆರಾದಲ್ಲಿ ನಡೆಯಲಿರುವ ಅಭ್ಯಾಸ ಪಂದ್ಯಕ್ಕೆ ಲಭ್ಯವಿರಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News