×
Ad

ವಿಂಬಲ್ಡನ್ | ಅಮೆರಿಕದ ಆಟಗಾರ್ತಿ ಅನಿಸಿಮೋವಾ ವರ್ತನೆ ಟೀಕಿಸಿದ ಸಬಲೆಂಕಾ

Update: 2025-07-11 22:03 IST

PC : @TheTennisLetter

ಲಂಡನ್: ವಿಂಬಲ್ಡನ್ ಟೆನಿಸ್ ಟೂರ್ನಿಯ ಸೆಮಿ ಫೈನಲ್‌ನಲ್ಲಿ ತನ್ನ ವಿರುದ್ಧ ಜಯ ಸಾಧಿಸಿರುವ ಅಮೆರಿಕದ ಆಟಗಾರ್ತಿ ಅಮಂಡಾ ಅನಿಸಿಮೋವಾ ಅವರ ವರ್ತನೆಯನ್ನು ವಿಶ್ವದ ನಂ.1 ಆಟಗಾರ್ತಿ ಆರ್ಯನಾ ಸಬಲೆಂಕಾ ಟೀಕಿಸಿದ್ದಾರೆ.

ಅಗ್ರ ಶ್ರೇಯಾಂಕದ ಆಟಗಾರ್ತಿ ಸಬಲೆಂಕಾ ಅವರನ್ನು ಗುರುವಾರ 6-4, 4-6, 6-4 ಸೆಟ್‌ ಗಳ ಅಂತರದಿಂದ ಮಣಿಸಿದ್ದ 13ನೇ ಶ್ರೇಯಾಂಕದ ಅನಿಸಿಮೋವಾ ಅವರು ಆಲ್ ಇಂಗ್ಲೆಂಡ್ ಕ್ಲಬ್‌ ನಲ್ಲಿ ಮೊದಲ ಬಾರಿ ಫೈನಲ್ ತಲುಪಬೇಕೆಂಬ ಕನಸನ್ನು ಭಗ್ನಗೊಳಿಸಿದ್ದರು.

ಸೆಮಿ ಫೈನಲ್ ಪಂದ್ಯದ ವೇಳೆಯೇ ಅನಿಸಿಮೋವಾ ಮೇಲೆ ತಾಳ್ಮೆ ಕಳೆದುಕೊಂಡ ಬೆಲಾರುಸ್ ಆಟಗಾರ್ತಿ ಸಬಲೆಂಕಾ, ಪಂದ್ಯ ಮುಗಿದ ಕೆಲವು ಗಂಟೆಗಳ ನಂತರವೂ ಅವರ ಸಿಟ್ಟು ತಣಿಯಲಿಲ್ಲ.

ಅಂಕ ಗಳಿಸಿದ ಸಂಭ್ರಮವನ್ನು ಬೇಗನೆ ಆಚರಿಸಿದ ಅನಿಸಿಮೋವಾ ವರ್ತನೆಗೆ 27ರ ಹರೆಯದ ಸಬಲೆಂಕಾ ಅಸಮಾಧಾನ ವ್ಯಕ್ತಪಡಿಸಿದರು.

‘‘ನಾನು ಚೆಂಡನ್ನು ಚೇಸ್ ಮಾಡಲು ಪ್ರಯತ್ನಿಸುತ್ತಿದ್ದೆ. ಅದಾಗಲೇ ಆಕೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಅಂದರೆ ಆಕೆ ಬೇಗನೆ ಸಂಭ್ರಮಿಸತೊಡಗಿದ್ದರು. ‘ಓಹ್ ಅವಳು ಯಾವಾಗಲೂ ಹಾಗೆ ಮಾಡುತ್ತಾಳೆ’ಎಂದು ಹೇಳಿ ನನ್ನನ್ನು ಕೆರಳಿಸಿದರು’’ ಎಂದು ಸಬಲೆಂಕಾ ಹೇಳಿದರು.

‘‘ಅನಿಸಿಮೋವಾ ಅವರ ವರ್ತನೆಗಳು ಎರಡನೇ ಸೆಟ್‌ ನಲ್ಲಿ ಮತ್ತೆ ಹೋರಾಡಲು ನನಗೆ ಪ್ರೇರೇಪಿಸಿತು’’ ಎಂದು ಮೂರು ಬಾರಿಯ ಗ್ರ್ಯಾನ್‌ ಸ್ಲಾಮ್ ಚಾಂಪಿಯನ್ ಸಬಲೆಂಕಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News