ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ | ಡೆಲ್ಲಿ ಫ್ರಾಂಚೈಸಿ ಮಾಲಿಕರಾಗಿ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್
ಸಲ್ಮಾನ್ ಖಾನ್ | PC : PTI
ಹೊಸದಿಲ್ಲಿ: ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್(ಐಎಸ್‌ಪಿಎಲ್) ಬುಧವಾರ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರನ್ನು ತನ್ನ ಹೊಸ ಡೆೆಲ್ಲಿ ಫ್ರಾಂಚೈಸಿಯ ಮಾಲಿಕರನ್ನಾಗಿ ಘೋಷಿಸಿದೆ.
ಐಎಸ್‌ಪಿಎಲ್ ನ ಎರಡನೇ ಋತು 28 ಮಿಲಿಯನ್ ವೀಕ್ಷಕರನ್ನು ತಲುಪಿದ ಹಾಗೂ ಟಿವಿ ವೀಕ್ಷಕರಲ್ಲಿ ಶೇ.47 ಬೆಳವಣಿಗೆಯನ್ನು ಸಾಧಿಸಿದ ನಂತರ ಈ ಬೆಳವಣಿಗೆ ನಡೆದಿದೆ.
ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡುಲ್ಕರ್ ಹಾಗೂ ಇತರ ಪ್ರಮುಖರಿಂದ ಬೆಂಬಲಿಸಲ್ಪಟ್ಟ ಟೆನಿಸ್ ಬಾಲ್ ಟಿ10 ಕ್ರಿಕೆಟ್ ಲೀಗ್ ಭಾರತದ ಅತಿ ದೊಡ್ಡ ಕ್ರೀಡಾ ಉತ್ಸವವಾಗಿ ತನ್ನ ಅಸ್ತಿತ್ವವನ್ನು ವಿಸ್ತರಿಸುತ್ತಾ ಸಾಗಿದೆ.
ಲೀಗ್ ನ ಕೋರ್ ಕಮಿಟಿಯಲ್ಲಿ ತೆಂಡುಲ್ಕರ್, ಏಶ್ಯನ್ ಕ್ರಿಕೆಟ್ ಕೌನ್ಸಿಲ್ ಮೆಂಬರ್ ಹಾಗೂ ಕ್ಯಾಬಿನೆಟ್ ಸಚಿವ ಆಶೀಶ್ ಶೇಲಾರ್, ಮಿನಾಲ್ ಅಮೋಲ್ ಕಾಳೆ ಹಾಗೂ ಸೂರಜ್ ಸಮಟ್ ಅವರಿದ್ದಾರೆ.
ತಳಮಟ್ಟದ ಪ್ರತಿಭೆಗಳನ್ನು ವೃತ್ತಿಪರ ಕ್ರಿಕೆಟ್ ಅವಕಾಶದೊಂದಿಗೆ ತಲುಪುವುದು ಲೀಗ್ ನ ಧ್ಯೇಯವಾಗಿದೆ.
ವಿವಿಧ ನಗರಗಳನ್ನು ಪ್ರತಿನಿಧಿಸುವ ತಂಡಗಳಿಗೆ ಸೆಲೆಬ್ರಿಟಿಗಳಾದ ಅಮಿತಾಬ್ ಬಚ್ಚನ್, ಸೈಫ್ ಅಲಿ ಖಾನ್, ಕರೀನಾ ಕಪೂರ್ ಖಾನ್, ಅಕ್ಷಯ್ ಕುಮಾರ್, ಸೂರ್ಯ, ಹೃತಿಕ್ ರೋಶನ್ ಹಾಗೂ ರಾಮ್‌ಚರಣ್ ಸೇರಿದಂತೆ ಹಲವರು ಮಾಲಕತ್ವ ವಹಿಸಿಕೊಂಡಿದ್ದಾರೆ.