×
Ad

ಚೀನಾ ಮಾಸ್ಟರ್ಸ್ : ಸಾತ್ವಿಕ್-ಚಿರಾಗ್ ಜೋಡಿ ಫೈನಲ್‌ಗೆ

Update: 2025-09-20 21:48 IST

ಸಾತ್ವಿಕ್-ಚಿರಾಗ್ | PC :  X \ @TheKhelIndia

ಬೀಜಿಂಗ್, ಸೆ. 20: ಬೀಜಿಂಗ್‌ನಲ್ಲಿ ನಡೆಯುತ್ತಿರುವ ಚೀನಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಶನಿವಾರ ಭಾರತೀಯ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಫೈನಲ್ ತಲುಪಿದೆ.

ಸೆಮಿಫೈನಲ್‌ನಲ್ಲಿ ಭಾರತೀಯ ಜೋಡಿಯು ಮಲೇಶ್ಯದ ಆರೋನ್ ಚಿಯಾ ಹಾಗೂ ಸೋ ವೂಯಿ ಯಿಕ್ ಜೋಡಿಯನ್ನು 21-17, 21-14 ಗೇಮ್‌ಗಳಿಂದ ಸೋಲಿಸಿದೆ. ಪಂದ್ಯವು 41 ನಿಮಿಷಗಳ ಕಾಲ ಸಾಗಿತು.

ಇದರೊಂದಿಗೆ ಭಾರತೀಯ ಜೋಡಿಯು ಬಿಡಬ್ಲ್ಯುಎಫ್ ಟೂರ್‌ನಲ್ಲಿ ಬೆನ್ನು-ಬೆನ್ನಿಗೆ ಫೈನಲ್ ತಲುಪಿದಂತಾಗಿದೆ. ಇದಕ್ಕೂ ಮುನ್ನ ಅದು ಹಾಂಕಾಂಗ್ ಓಪನ್‌ನಲ್ಲಿ ಫೈನಲ್ ತಲುಪಿತ್ತು. ಈ ಹಿಂದೆ ಸಾತ್ವಿಕ್ ಮತ್ತು ಚಿರಾಗ್ ಈ ಟೂರ್‌ನಲ್ಲಿ ಬೆನ್ನು ಬೆನ್ನಿಗೆ ಫೈನಲ್ ತಲುಪಿದ್ದು 2024ರ ಜನವರಿಯಲ್ಲಿ. ಅಂದು ಮಲೇಶ್ಯ ಓಪನ್ ಮತ್ತು ಇಂಡಿಯಾ ಓಪನ್‌ನಲ್ಲಿ ಅವರು ಈ ಸಾಧನೆಗೈದಿದ್ದರು. ಎರಡರಲ್ಲೂ ರನ್ನರ್ಸ್-ಅಪ್ ಆಗಿ ಹೊರಹೊಮ್ಮಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News