×
Ad

ನಿನ್ನನ್ನು ಮಾತನಾಡಿಸದ ಹಾಗೆ ಎಲ್ಲ ಕಡೆ ಬ್ಲಾಕ್ ಮಾಡಿದರು: ಪುತ್ರನ ಬಗ್ಗೆ ಶಿಖರ್ ಧವನ್ ಭಾವುಕ

Update: 2023-12-27 00:07 IST

Photo: instagram.com/shikhardofficial

ಹೊಸದಿಲ್ಲಿ: ತನ್ನ ಪತ್ನಿಯಿಂದ ವಿಚ್ಛೇದನ ಪಡೆದಿರುವ ಭಾರತದ ಕ್ರಿಕೆಟಿಗ ಶಿಖರ್ ಧವನ್ ತಮ್ಮ ಮಗನ ಹುಟ್ಟುಹಬ್ಬವಾದ ಮಂಗಳವಾರ ಭಾವುಕರಾಗಿ ಪೋಸ್ಟ್ ಮಾಡಿದ್ದಾರೆ. ನಿನ್ನನ್ನು (ಮಗನನ್ನು) ನೋಡದ ಹಾಗೆ ಎಲ್ಲ ಕಡೆ ಬ್ಲಾಕ್ ಮಾಡಿದರು ಎಂದು ಬರೆದುಕೊಂಡಿದ್ದಾರೆ.

ಮಗನ ಹುಟ್ಟುಹಬ್ಬಕ್ಕೆ ಇನ್ಸ್ಟಾಗ್ರಾಮ್ನಲ್ಲಿ ಶುಭಾಶಯ ತಿಳಿಸಿರುವ ಧವನ್, ನಿನ್ನನ್ನು ವೈಯಕ್ತಿಕವಾಗಿ ಭೇಟಿಯಾಗದೇ ಸುಮಾರು ಒಂದು ವರ್ಷವೇ ಕಳೆದಿದೆ. ಕಳೆದ 3 ತಿಂಗಳಿನಿಂದ ನಿನ್ನನ್ನು ಮಾತನಾಡಿಸದ ಹಾಗೆ ಎಲ್ಲ ಕಡೆಯಲ್ಲೂ ಬ್ಲಾಕ್ ಮಾಡಲಾಗಿತ್ತು. ಹುಟ್ಟುಹಬ್ಬವಾದ ಇಂದು ನಿನ್ನ ಹಳೆ ಪೋಟೊವನ್ನು ಪೋಸ್ಟ್ ಮಾಡುತ್ತಿರುವೆ. ಹುಟ್ಟುಹಬ್ಬದ ಶುಭಾಶಯಗಳು ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಪತ್ನಿಯಿಂದ ವಿಚ್ಛೇದನ ಪಡೆದಿದ್ದ ಧವನ್ ಗೆ ಮಗನನ್ನು ಖಾಯಂ ಕಸ್ಟಡಿಗೆ ತೆಗೆದುಕೊಳ್ಳಲು ನ್ಯಾಯಾಲಯ ಒಪ್ಪಿಗೆ ನೀಡಿರಲಿಲ್ಲ. ಆದರೆ, ಭಾರತ ಹಾಗೂ ಆಸ್ಟ್ರೇಲಿಯಕ್ಕೆ ಹೋಗಿ ಭೇಟಿ ಮಾಡಲು ಹಾಗೂ ವೀಡಿಯೊ ಕರೆ ಮಾಡಲು ಅವಕಾಶ ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News