×
Ad

ಆಸ್ಟ್ರೇಲಿಯ ‘ಎ’ ವಿರುದ್ಧ ಏಕದಿನ ಸರಣಿ : ಭಾರತ ‘ಎ’ ತಂಡದ ನಾಯಕನಾಗಿ ಶ್ರೇಯಸ್ ಅಯ್ಯರ್ ನೇಮಕ

Update: 2025-09-26 20:53 IST

ಶ್ರೇಯಸ್ ಅಯ್ಯರ್ | PTI

ಮುಂಬೈ, ಸೆ.26: ಬೆನ್ನು ನೋವಿನಿಂದಾಗಿ ಆಸ್ಟ್ರೇಲಿಯ ‘ಎ’ ವಿರುದ್ಧ 2ನೇ ಅನಧಿಕೃತ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಶ್ರೇಯಸ್ ಅಯ್ಯರ್ ಕೆಂಪು ಚೆಂಡಿನ ಕ್ರಿಕೆಟ್‌ನಿಂದ 6 ತಿಂಗಳು ವಿರಾಮ ಪಡೆದಿದ್ದಾರೆ. ರಾಷ್ಟ್ರೀಯ ಆಯ್ಕೆಗಾರರು ಮಧ್ಯಮ ಸರದಿಯ ಬ್ಯಾಟರ್ ಅಯ್ಯರ್ ಅವರ ಏಕದಿನ ಕ್ರಿಕೆಟಿನ ಸಾಮರ್ಥ್ಯದ ಮೇಲೆ ನಂಬಿಕೆ ಇರಿಸಿದ್ದಾರೆ.

30ರ ಹರೆಯದ ಅಯ್ಯರ್‌ಗೆ ವಿಶ್ರಾಂತಿ ಪಡೆಯಲು ತಿಳಿಸಲಾಗಿದೆ ಎಂದಿರುವ ಬಿಸಿಸಿಐ, ಸೆ.30ರಿಂದ ಅಕ್ಟೋಬರ್ 5ರ ತನಕ ಕಾನ್ಪುರದಲ್ಲಿ ನಡೆಯಲಿರುವ ಆಸ್ಟ್ರೇಲಿಯ ‘ಎ’ ವಿರುದ್ಧದ ಏಕದಿನ ಸರಣಿಗೆ ಭಾರತ ‘ಎ’ ತಂಡದ ನಾಯಕನಾಗಿ ಅಯ್ಯರ್ ಆಯ್ಕೆಯಾಗಿದ್ದಾರೆ.

ವೆಸ್ಟ್‌ಇಂಡೀಸ್ ವಿರುದ್ಧ ಸ್ವದೇಶದಲ್ಲಿ ನಡೆಯಲಿರುವ ಸರಣಿಗೆ ಭಾರತ ಟೆಸ್ಟ್ ತಂಡವನ್ನು ಪ್ರಕಟಿಸಿದ ದಿನದಂದೇ ಈ ಪ್ರಕಟನೆ ನೀಡಲಾಗಿದೆ. 2023ರಲ್ಲಿ ಬ್ರಿಟನ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಬೆನ್ನಿನ ನೋವಿನಿಂದ ಅಯ್ಯರ್ ಚೇತರಿಸಿಕೊಳ್ಳುತ್ತಿದ್ದಾರೆ. ಲಕ್ನೊದಲ್ಲಿ ಆಸ್ಟ್ರೇಲಿಯ ‘ಎ’ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಅಯ್ಯರ್ ಬದಲಿಗೆ ಉಪ ನಾಯಕ ಧ್ರುವ ಜುರೆಲ್ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News