×
Ad

ಟೆಸ್ಟ್ ಕ್ರಿಕೆಟ್‌ ನ ನಿಯಮಗಳನ್ನು ಉಲ್ಲಂಘಿಸಿದ ಶುಭಮನ್ ಗಿಲ್?

Update: 2025-06-21 20:23 IST

ಶುಭಮನ್ ಗಿಲ್ | PC : X \ @DrSanjivGoenka

ಲೀಡ್ಸ್: ಭಾರತ ಕ್ರಿಕೆಟ್ ತಂಡದ ಟೆಸ್ಟ್ ನಾಯಕನಾಗಿ ಆಡಿರುವ ಮೊದಲ ಪಂದ್ಯದಲ್ಲಿ ಶತಕವನ್ನು ಸಿಡಿಸಿ ತನ್ನ ನಾಯಕತ್ವ ಹಾಗೂ ಬ್ಯಾಟಿಂಗ್ ಸಾಹಸದಿಂದ ಎಲ್ಲರ ಶ್ಲಾಘನೆಗೆ ಒಳಗಾಗಿರುವ ಶುಭಮನ್ ಗಿಲ್ ಅವರು ತಾನು ಧರಿಸಿದ ಬಟ್ಟೆಯಲ್ಲಿ ಆಗಿರುವ ತಪ್ಪಿನಿಂದಾಗಿ ತೊಂದರೆಗೆ ಸಿಲುಕುವ ಸಾಧ್ಯತೆಯಿದೆ.

ಮೊದಲ ಟೆಸ್ಟ್‌ನ ಮೊದಲ ದಿನದಾಟದಂತ್ಯಕ್ಕೆ ಔಟಾಗದೆ 127 ರನ್ ಗಳಿಸಿದ್ದ ಗಿಲ್ ಅವರು ಕಪ್ಪು ಸಾಕ್ಸ್‌ಗಳನ್ನು ಧರಿಸಿದ್ದರು. ಇದು ಟೆಸ್ಟ್ ಕ್ರಿಕೆಟ್‌ ನ ಉಡುಪು ಹಾಗೂ ಸಲಕರಣೆಗಳ ನಿಯಮಗಳ ಉಲ್ಲಂಘನೆಯಾಗಿದೆ.

ಐಸಿಸಿ ನಿಯಮಾವಳಿಗಳ ಪ್ರಕಾರ, ಟೆಸ್ಟ್ ಪಂದ್ಯಗಳಲ್ಲಿ ಆಟಗಾರರು ಬಿಳಿ, ಕ್ರೀಮ್ ಅಥವಾ ತಿಳಿ ಬೂದು ಬಣ್ಣದ ಸಾಕ್ಸ್‌ಗಳನ್ನು ಧರಿಸಬೇಕಾಗುತ್ತದೆ. ಕಪ್ಪು ಸಾಕ್ಸ್ ಧರಿಸುವ ಮೂಲಕ ಗಿಲ್ ಐಸಿಸಿಯ ಬಟ್ಟೆ ಹಾಗೂ ಸಲಕರಣೆಯ ಸಂಹಿತೆಯ ಆರ್ಟಿಕಲ್-4 ಅನ್ನು ಉಲ್ಲಂಘಿಸಿದ್ದಾರೆ.

ಈ ತಪ್ಪಿಗೆ ಗಿಲ್‌ಗೆ ಛೀಮಾರಿ ವಿಧಿಸಬಹುದು. 12 ತಿಂಗಳ ಅವಧಿಯಲ್ಲಿ ಇದೇ ತಪ್ಪನ್ನು ಪುನರಾವರ್ತಿಸಿದರೆ ದಂಡವನ್ನು ಪಂದ್ಯಶುಲ್ಕದ ಶೇ.75ರ ತನಕ ಹೆಚ್ಚಿಸಬಹುದು. ನಿಯಮ ಉಲ್ಲಂಘನೆಯು ಆಕಸ್ಮಿಕವೇ ಅಥವಾ ಉದ್ದೇಶಪೂರ್ವಕ ಲೆವೆಲ್-1ರ ಉಲ್ಲಂಘನೆಯಾಗಿದೆಯೇ ಎಂಬುದನ್ನು ಪಂದ್ಯದ ರೆಫರಿ ಈಗ ನಿರ್ಧರಿಸಲಿದ್ದಾರೆ. ಗಿಲ್ ತಪ್ಪು ಮಾಡಿದ್ದು ಕಂಡು ಬಂದರೆ ಪಂದ್ಯ ಶುಲ್ಕದಲ್ಲಿ 10ರಿಂದ 20 ಪ್ರತಿಶತದಷ್ಟು ದಂಡ ತೆರಬೇಕಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News