×
Ad

ಏಶ್ಯಕಪ್ | ಪಾಕ್ ಜತೆಗಿನ ಪಂದ್ಯಕ್ಕೆ ಮುನ್ನ ಗಿಲ್ ಗಾಯಾಳು

Update: 2025-09-14 07:41 IST

PC | ndtv

ದುಬೈ: ಎದುರಾಳಿ ಪಾಕಿಸ್ತಾನದ ಜತೆಗಿನ ಏಷ್ಯಾಕಪ್ ಟಿ20 ಪಂದ್ಯಕ್ಕೆ ಮುನ್ನ ಭಾರತ ತಂಡವನ್ನು ಗಾಯದ ಸಮಸ್ಯೆ ಕಾಡುತ್ತಿದೆ. ಭಾರತದ ಸ್ಟಾರ್ ಬ್ಯಾಟರ್‌ ಶುಭಮನ್ ಗಿಲ್ ತರಬೇತಿಯ ವೇಳೆ ಗಾಯಗೊಂಡಿರುವುದು ತಂಡಕ್ಕೆ ದೊಡ್ಡ ಹಿನ್ನಡೆ ಎನಿಸಿದೆ.

ಯುಎಇ ಜತೆಗಿನ ಆರಂಭಿಕ ಪಂದ್ಯದಲ್ಲಿ ಭಾರತ ತಂಡದ ಉಪನಾಯಕ 9 ಎಸೆತಗಳಲ್ಲಿ 20 ರನ್ ಸಿಡಿಸಿದ್ದರು. ಆದರೆ ಅಭ್ಯಾಸದ ವೇಳೆ ಚೆಂಡು ಬಡಿದಾಗ ತೀರಾ ಯಾತನೆ ಅವರ ಮುಖದಲ್ಲಿ ಕಂಡುಬಂತು. ತಂಡದ ಫಿಸಿಯೊ ತಜ್ಞರು ಚಿಕಿತ್ಸೆ ನೀಡಿದ ಬಳಿಕ ಗಿಲ್ ಮೈದಾನದಿಂದ ಹೊರನಡೆದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

"ಈ ಘಟನೆಯ ಬಳಿಕ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಗಿಲ್ ಜತೆ ಮಾತನಾಡುತ್ತಿರುವುದು ಕಂಡುಬಂತು. ಆದರೆ ಅವರ ಜತೆಗಾರ ಅಭಿಷೇಕ್ ಶರ್ಮಾ ಅಲ್ಲೇ ಉಳಿದುಕೊಂಡು ನೀರಿನ ಬಾಟಲಿ ನೀಡಿ ಉಪಚರಿಸಿದರು. ದೈಹಿಕ ತಜ್ಞರು ಅಭ್ಯಾಸದುದ್ದಕ್ಕೂ ಗಿಲ್ ಸ್ಥಿತಿಯ ಮೇಲೆ ನಿಗಾ ಇರಿಸಿದ್ದರು"

ಆದಾಗ್ಯೂ ನೋವು ಕಡಿಮೆಯಾದ ಬಳಿಕ ಗಿಲ್ ಮತ್ತೆ ತರಬೇತಿಯಲ್ಲಿ ಪಾಲ್ಗೊಂಡರು ಎಂದು ವರದಿ ಹೇಳಿದೆ. ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಭಾನುವಾರ ನಡೆಯುವ ಪಾಕಿಸ್ತಾನ ಜತೆಗಿನ ಮಹತ್ವದ ಪಂದ್ಯಕ್ಕೆ ಮುನ್ನ ಇದು ಭಾರತಕ್ಕೆ ದೊಡ್ಡ ಹಿನ್ನಡೆ ಎನ್ನಲಾಗಿದೆ.

ಗಿಲ್ ವರ್ಷದ ಬಳಿಕ ತಮ್ಮ ಮೊದಲ ಟಿ20 ಪಂದ್ಯವನ್ನು ಯುಎಇ ವಿರುದ್ಧ ಆಡಿದ್ದರು. 26 ವರ್ಷ ವಯಸ್ಸಿನ ಗಿಲ್ 114 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 146 ಇನಿಂಗ್ಸ್ ಗಳಲ್ಲಿ 46.30 ಸರಾಸರಿಯಲ್ಲಿ 6,020 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 18 ಶತಕ ಹಾಗೂ 25 ಅರ್ಧಶತಕ ಸೇರಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News