ಮಹಿಳೆಯರ ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್‌ನಾಲ್ಕನೇ ಸ್ಥಾನಕ್ಕೇರಿದ ಸ್ಮತಿ ಮಂಧಾನ
ಸ್ಮತಿ ಮಂಧಾನ | Photo: PTI
ಹೊಸದಿಲ್ಲಿ: ಭಾರತದ ಸ್ಟಾರ್ ಓಪನರ್ ಸ್ಮತಿ ಮಂಧಾನ ಮಂಗಳವಾರ ಬಿಡುಗಡೆಯಾದ ಮಹಿಳೆಯರ ಐಸಿಸಿ ಏಕದಿನ ರ‍್ಯಾಂಕಿಂಗ್ ನಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ.
ಮಂಧಾನ ಹಲವು ಸ್ಥಾನಗಳಲ್ಲಿ ಭಡ್ತಿ ಪಡೆದು ಆಸ್ಟ್ರೇಲಿಯದ ಎಲ್ಲಿಸ್ ಪೆರ್ರಿ ಹಾಗೂ ದಕ್ಷಿಣ ಆಫ್ರಿಕಾದ ಲೌರಾ ವೊಲ್ವಾರ್ಟ್ರನ್ನು ಬ್ಯಾಟಿಂಗ್ ರ್ಯಾಂಕಿಂಗ್ ನಲ್ಲಿ ಹಿಂದಿಕ್ಕಿದ್ದಾರೆ.
ರ್ಯಾಂಕಿಂಗ್ ಪಟ್ಟಿಯಲ್ಲಿ ಇಂಗ್ಲೆಂಡಿನ ನಾಟ್ ಸಿವೆರ್ ಬ್ರಂಟ್, ಶ್ರೀಲಂಕಾದ ಚಾಮರಿ ಅಥಪಟ್ಟು ಹಾಗೂ ಆಸ್ಟ್ರೇಲಿಯದ ಬೆಥ್ ಮೂನಿ ಅಗ್ರ-3 ಸ್ಥಾನಗಳನ್ನು ವಶಪಡಿಸಿಕೊಂಡಿದ್ದಾರೆ. ಭಾರತದ ನಾಯಕಿ ಹರ್ಮನ್ಪ್ರೀತ್ ಕೌರ್ 10ನೇ ಸ್ಥಾನದಲ್ಲಿದ್ದಾರೆ.
ಮಹಿಳೆಯರ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿರುವ ಮಂಧಾನ ಆಸ್ಟ್ರೇಲಿಯ ವಿರುದ್ಧ ದ್ವಿಪಕ್ಷೀಯ ಸರಣಿಯ ವೇಳೆ ಕೊನೆಯ ಬಾರಿ ಏಕದಿನ ಪಂದ್ಯ ಆಡಿದ್ದರು.
ಬೌಲಿಂಗ್ ಪಟ್ಟಿಯಲ್ಲಿ ಇಂಗ್ಲೆಂಡಿನ ಸೋಫಿ ಎಕ್ಲೆಸ್ಟೋನ್ ಮೊದಲ ಸ್ಥಾನದಲ್ಲಿದ್ದಾರೆ. ಭಾರತದ ಸ್ಪಿನ್ನರ್ ದೀಪ್ತಿ ಶರ್ಮಾ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ. ಏಕದಿನ ಆಲ್ ರೌಂಡರ್ ಪಟ್ಟಿಯಲ್ಲಿ ದೀಪ್ತಿ 5ನೇ ಸ್ಥಾನಕ್ಕೇರಿದ್ದಾರೆ.