×
Ad

ದಕ್ಷಿಣ ಆಫ್ರಿಕಾ ವಿರುದ್ಧ ದ್ವಿತೀಯ ODIನಲ್ಲಿ ನಿಧಾನಗತಿಯ ಬೌಲಿಂಗ್: Team Indiaಕ್ಕೆ ದಂಡ

Update: 2025-12-08 20:28 IST

Photo Credit : PTI 

ದುಬೈ, ಡಿ.8: ರಾಯ್ಪುರದಲ್ಲಿ ನಡೆದಿದ್ದ ದ್ವಿತೀಯ ಏಕದಿನ ಪಂದ್ಯದ ವೇಳೆ ನಿಧಾನಗತಿಯ ಬೌಲಿಂಗ್ ಮಾಡಿದ್ದಕ್ಕಾಗಿ ಸೋಮವಾರ ಟೀಮ್ ಇಂಡಿಯಾಕ್ಕೆ ಅದರ ಪಂದ್ಯಶುಲ್ಕದ ಶೇ.10ರಷ್ಟು ದಂಡ ವಿಧಿಸಲಾಗಿದೆ.

ಎರಡನೇ ಏಕದಿನ ಪಂದ್ಯವನ್ನು ಭಾರತ ತಂಡವು ಸೋತಿತ್ತು. ಆ ಪಂದ್ಯವನ್ನು ಗೆದ್ದಿದ್ದ ದಕ್ಷಿಣ ಆಫ್ರಿಕಾ ತಂಡವು ಸರಣಿಯನ್ನು 1-1ರಿಂದ ಸಮಬಲಗೊಳಿಸಿತ್ತು. ವಿಶಾಖಪಟ್ಟಣದಲ್ಲಿ ನಡೆದಿದ್ದ ಮೂರನೇ ಏಕದಿನ ಪಂದ್ಯವನ್ನು ಜಯಿಸಿದ್ದ ಭಾರತ ತಂಡ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತ್ತು.

ಕೆ.ಎಲ್.ರಾಹುಲ್ ನಾಯಕತ್ವದ ಭಾರತ ತಂಡವು ನಿಗದಿತ ಗುರಿಗಿಂತ ಎರಡು ಓವರ್ ಕಡಿಮೆ ಎಸೆದಿರುವುದು ಕಂಡಬಂದ ನಂತರ ಎಲೈಟ್ ಪ್ಯಾನೆಲ್ ಮ್ಯಾಚ್ ರೆಫರಿ ರಿಚಿ ರಿಚರ್ಡ್‌ಸನ್ ದಂಡ ವಿಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News