×
Ad

ಫುಟ್ಬಾಲ್ ಜೆರ್ಸಿ ಧರಿಸಿ ಕ್ರಿಕೆಟ್ ತಂಡಕ್ಕೆ ಶುಭಾಶಯ ಕೋರಿದ ದಕ್ಷಿಣ ಆಫ್ರಿಕಾ ಅಧ್ಯಕ್ಷ!

Update: 2025-11-02 21:42 IST

 ಸಿರಿಲ್ ರಾಮಫೋಸಾ | Photo Credit : @CyrilRamaphosa

ಕೇಪ್‌ಟೌನ್, ನ.2: ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಶನಿವಾರ ಭಾರತದ ವಿರುದ್ಧ ಐಸಿಹಾಸಿಕ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಕ್ಕಿಂತ ಮೊದಲು ರಾಷ್ಟ್ರೀಯ ಫುಟ್ಬಾಲ್ ತಂಡದ ಜೆರ್ಸಿ ಧರಿಸಿ ಮಹಿಳಾ ಕ್ರಿಕೆಟ್ ತಂಡವನ್ನು ಉದ್ದೇಶಿಸಿ ವೀಡಿಯೊ ಸಂದೇಶದಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.

ನವಿ ಮುಂಬೈನಲ್ಲಿ ಭಾರತ ತಂಡವನ್ನು ಎದುರಿಸಲು ಸಜ್ಜಾಗಿರುವ ಲೌರಾ ವೊಲ್ವಾರ್ಡ್ ನೇತೃತ್ವದ ತಂಡವನ್ನು ಉತ್ತೇಜಿಸುವ ಸಲುವಾಗಿ ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿತ್ತು. ಆದರೆ, ಅಧ್ಯಕ್ಷರು ಕ್ರಿಕೆಟ್ ಬದಲಿಗೆ ಫುಟ್ಬಾಲ್ ಜೆರ್ಸಿ ಧರಿಸಿದ ಕಾರಣ ಆ ವೀಡಿಯೊ ತಕ್ಷಣವೇ ವೈರಲ್ ಆಗಿದೆ. ರಾಷ್ಟ್ರದ ಅಧ್ಯಕ್ಷರೇ ಕ್ರಿಕೆಟ್ ಬದಲಿಗೆ ಫುಟ್ಬಾಲ್ ಜೆರ್ಸಿ ಧರಿಸಿ ಇಷ್ಟೊಂದು ದೊಡ್ಡ ಪ್ರಮಾದ ಮಾಡಿದ್ದು ಹೇಗೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ದಕ್ಷಿಣ ಆಫ್ರಿಕಾ ತಂಡ ಇದೇ ಮೊದಲ ಬಾರಿ ಮಹಿಳಾ ಏಕದಿನ ವಿಶ್ವಕಪ್‌ ನಲ್ಲಿ ಫೈನಲ್ ಪಂದ್ಯವನ್ನು ಆಡುತ್ತಿದ್ದು, ಭಾರತ ತಂಡವು 2005 ಹಾಗೂ 2017ರಲ್ಲಿ 2ನೇ ಸ್ಥಾನ ಪಡೆದ ನಂತರ ಈ ಬಾರಿ ಮೊದಲ ಪ್ರಶಸ್ತಿ ಗೆಲ್ಲುವ ಗುರಿ ಇಟ್ಟುಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News