×
Ad

ಅ.1ರಿಂದ ಸೆಂಟರ್ ಆಫ್ ಎಕ್ಸಲೆನ್ಸ್ ನೂತನ ಕೋಚ್ ಆಗಿ ಸುನೀಲ್ ಜೋಶಿ

Update: 2025-09-27 22:05 IST

 ಸುನೀಲ್ ಜೋಶಿ | PC : PTI

ಹೊಸದಿಲ್ಲಿ, ಸೆ. 27: ಬೆಂಗಳೂರಿನಲ್ಲಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನೂತನ ಸ್ಪಿನ್ ಬೌಲಿಂಗ್ ಕೋಚ್ ಆಗಿ ಸುನೀಲ್ ಜೋಶಿ ಅಕ್ಟೋಬರ್ ಒಂದರಿಂದ ಕಾರ್ಯನಿರ್ವಹಿಸಲಿದ್ದಾರೆ.

55 ವರ್ಷದ ಕ್ರಿಕೆಟಿಗ ಇತ್ತೀಚೆಗೆ ಮುಕ್ತಾಯಗೊಂಡ ದುಲೀಪ್ ಟ್ರೋಫಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಬಳಿಕ, ಆಸ್ಟ್ರೇಲಿಯ ಎ ತಂಡದ ವಿರುದ್ಧದ ಪಂದ್ಯಗಳಿಗಾಗಿ ಲಕ್ನೋಗೆ ತೆರಳಿರುವ ಭಾರತ ಎ ತಂಡದ ಜೊತೆಗೂ ಹೋಗಿದ್ದಾರೆ.

ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ನ ಕಳೆದ ವರ್ಷದ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಸಹಾಯಕ ಕೋಚ್ ಆಗಿದ್ದರು. ಇನ್ನು ಪಂಜಾಬ್ ಕಿಂಗ್ಸ್ ತಂಡವು ನೂತನ ಸಹಾಯಕ ಕೋಚ್‌ಗಾಗಿ ಹುಡುಕಾಡಬೇಕಾಗಿದೆ.

ಈ ಹುದ್ದೆಗಾಗಿ ಹಲವು ಅಭ್ಯರ್ಥಿಗಳನ್ನು ಈ ವರ್ಷದ ಆದಿ ಭಾಗದಲ್ಲಿ ಸಂದರ್ಶಿಸಲಾಗಿತ್ತು. ಆದರೆ, ಅಗಾಧ ಕೋಚಿಂಗ್ ಅನುಭವ ಹೊಂದಿರುವ ಜೋಶಿ, ರಾಕೇಶ್ ಧ್ರುವ ಮತ್ತು ನೂಶಿನ್ ಅಲ್ ಖಾದೀರ್ ಮುಂತಾದವರನ್ನು ಹಿಂದಿಕ್ಕಿದ್ದರು.

ಐಪಿಎಲ್ ಅಲ್ಲದೆ, ಜೋಶಿ ದೇಶಿ ಕ್ರಿಕೆಟ್‌ನಲ್ಲಿ ಉತ್ತರಪ್ರದೇಶ ತಂಡಕ್ಕೂ ತರಬೇತಿ ನೀಡಿದ್ದಾರೆ. ಅವರು ಬಾಂಗ್ಲಾದೇಶ ತಂಡಕ್ಕೆ ಸ್ಪಿನ್ ಬೌಲಿಂಗ್ ಸಲಹೆಗಾರನೂ ಆಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News