×
Ad

ಐಸಿಸಿ ವರ್ಷದ ಟಿ20 ಆಟಗಾರ ಪ್ರಶಸ್ತಿಗೆ ಸೂರ್ಯಕುಮಾರ್ ಆಯ್ಕೆ

Update: 2024-01-24 21:43 IST

ಸೂರ್ಯಕುಮಾರ್ ಯಾದವ್ | Photo: NDTV

ಹೊಸದಿಲ್ಲಿ: ಭಾರತದ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ತನ್ನ ಅಮೋಘ ಪ್ರದರ್ಶನ ಹಾಗೂ ನಿರಂತರ ಕೊಡುಗೆಗಾಗಿ ಸತತ ಎರಡನೇ ವರ್ಷವೂ ಪ್ರತಿಷ್ಠಿತ ಐಸಿಸಿ ವರ್ಷದ ಟಿ20 ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಟಿ20 ಮಾದರಿಯ ಕ್ರಿಕೆಟ್ ನಲ್ಲಿ ಸೂರ್ಯ ಭಾರತದ ಮಧ್ಯಮ ಸರದಿಯ ಬೆನ್ನೆಲುಬಾಗಿದ್ದಾರೆ. ರಾಷ್ಟ್ರೀಯ ತಂಡದ ಗೆಲುವುಗಳಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಶ್ಲಾಘಿಸಿದೆ.

ಶ್ರೀಲಂಕಾ ವಿರುದ್ಧ ಸಾಧಾರಣ ಪ್ರದರ್ಶನ ನೀಡಿದ್ದ ಸೂರ್ಯಕುಮಾರ್ ಆ ನಂತರ 2023ರಲ್ಲಿ ಸುಮಾರು 50ರ ಸರಾಸರಿಯಲ್ಲಿ 150ಕ್ಕೂ ಸ್ಟ್ರೈಕ್ರೇಟ್ ನಲ್ಲಿ ಬ್ಯಾಟಿಂಗ್ ಮಾಡಿದ್ದರು.

ವೆಸ್ಟ್ಇಂಡೀಸ್, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾದ ವಿರುದ್ಧ ಸೂರ್ಯಕುಮಾರ್ ನಿರ್ಣಾಯಕ ಇನಿಂಗ್ಸ್ ಆಡಿದ್ದಾರೆ. ಫ್ಲೋರಿಡಾದಲ್ಲಿ ವೆಸ್ಟ್ಇಂಡೀಸ್ ವಿರುದ್ಧ 83 ರನ್(44 ಎಸೆತ) ಹಾಗೂ 61 ರನ್(45 ಎಸೆತ)ಗಳಿಸಿದ್ದಾರೆ.

ಪುರುಷರ ಟಿ-20 ಕ್ರಿಕೆಟ್ ನಲ್ಲಿ ಎರಡನೇ ಅತ್ಯಂತ ವೇಗದ ಶತಕವನ್ನು ಶ್ರೀಲಂಕಾ ವಿರುದ್ಧ ಸಿಡಿಸಿದ್ದರು. ರೋಹಿತ್ ಶರ್ಮಾ 2017ರಲ್ಲಿ ಲಂಕಾದ ವಿರುದ್ಧ 35 ಎಸೆತಗಳಲ್ಲಿ ಶತಕ ಗಳಿಸಿದ್ದರು.

ಸದ್ಯ ಜರ್ಮನಿಯಲ್ಲಿ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿರುವ ಸೂರ್ಯ ಯಾದವ್ ಐಪಿಎಲ್ ವೇಳೆ ಸಕ್ರಿಯ ಕ್ರಿಕೆಟಿಗೆ ವಾಪಸಾಗುವ ನಿರೀಕ್ಷೆ ಇದೆ. ಐಪಿಎಲ್ ನಲ್ಲಿ ಅವರು ಮುಂಬಯಿ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಸತತ ಎರಡನೇ ಬಾರಿ ಐಸಿಸಿ ವರ್ಷದ ಟಿ20 ಆಟಗಾರ ಪ್ರಶಸ್ತಿಗೆ ಪಾತ್ರರಾಗಿರುವ ಸೂರ್ಯಕುಮಾರ್ ಭಾರತದ ಟಿ20 ತಂಡದ ಪ್ರಮುಖ ಆಟಗಾರನೆಂಬ ತನ್ನ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News