×
Ad

ಆಸ್ಟ್ರೇಲಿಯನ್ ಓಪನ್ ಪ್ರಮುಖ ಡ್ರಾನಲ್ಲಿ ಡೊಮಿನಿಕ್ ಥೀಮ್‌ಗೆ ಸ್ಥಾನ

Update: 2024-01-10 23:50 IST

photo : AFP Photo

Read more at:

http://timesofindia.indiatimes.com/articleshow/106675941.cms?utm_source=contentofinterest&utm_medium=text&utm_campaign=cppst

ಮೆಲ್ಬರ್ನ್ : ರಿಲಿ ಒಪೆಲ್ಕೊ ಟೂರ್ನಿಯಿಂದ ಹಿಂದೆ ಸರಿದ ಕಾರಣ 2020ರ ಯು.ಎಸ್. ಓಪನ್ ಚಾಂಪಿಯನ್ ಡೊಮಿನಿಕ್ ಥೀಮ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪ್ರಮುಖ ಡ್ರಾನಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಟೂರ್ನಿಯ ಸಂಘಟಕರು ಬುಧವಾರ ತಿಳಿಸಿದ್ದಾರೆ.

ಇತ್ತೀಚೆಗೆ ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲಿ ರಫೆಲ್ ನಡಾಲ್‌ಗೆ ಸೋತಿದ್ದ ಥೀಮ್ ಜ.14ರಿಂದ ಆರಂಭವಾಗಲಿರುವ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮೊದಲ ಸುತ್ತಿಗೆ ನೇರ ಪ್ರವೇಶ ಪಡೆದಿದ್ದಾರೆ.

30ರ ಹರೆಯದ ಆಸ್ಟ್ರೀಯ ಆಟಗಾರ 98ನೇ ರ‍್ಯಾಂಕ್ ನಲ್ಲಿದ್ದಾರೆ. 2020ರಲ್ಲಿ ಯು.ಎಸ್. ಓಪನ್ ಪ್ರಶಸ್ತಿಯನ್ನು ಜಯಿಸುವ ಮೂಲಕ ರೋಜರ್ ಫೆಡರರ್, ರಫೆಲ್ ನಡಾಲ್ ಹಾಗೂ ನೊವಾಕ್ ಜೊಕೊವಿಕ್‌ರ ಗ್ರ್ಯಾನ್‌ಸ್ಲಾಮ್ ಪ್ರಾಬಲ್ಯವನ್ನು ಮುರಿದು ಸುದ್ದಿಯಾಗಿದ್ದರು.

2021ರಲ್ಲಿ ಮಣಿಕಟ್ಟು ನೋವಿಗೆ ಒಳಗಾಗಿ ಹಿನ್ನಡೆ ಕಂಡಿದ್ದ ಥೀಮ್ ಹಲವು ತಿಂಗಳು ಸಕ್ರಿಯ ಟೆನಿಸ್‌ನಿಂದ ದೂರ ಉಳಿದಿದ್ದರು. 2020ರಲ್ಲಿ ಆಸ್ಟ್ರೇಲಿಯನ್ ಓಪನ್ ಫೈನಲ್‌ಗೆ ತಲುಪಿದ್ದ ಥೀಮ್ ಜೊಕೊವಿಕ್‌ಗೆ ಸೋತಿದ್ದರು. ಮುಂಬರುವ ಟೂರ್ನಮೆಂಟ್‌ನಲ್ಲಿ ಉತ್ತಮ ಪ್ರದರ್ಶನದ ಭರವಸೆಯಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News