×
Ad

ಟೆಸ್ಟ್ ಕ್ರಿಕೆಟ್: ಭಾರತ-ದಕ್ಷಿಣ ಆಫ್ರಿಕಾ ಹೆಡ್-ಟು-ಹೆಡ್ ದಾಖಲೆಯತ್ತ ಒಂದು ನೋಟ

Update: 2025-11-10 21:34 IST

ಹೊಸದಿಲ್ಲಿ, ನ.10: ಕೋಲ್ಕತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನ.14, ಶುಕ್ರವಾರದಿಂದ ಆರಂಭವಾಗಲಿರುವ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

ಸರಣಿಯ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವು ನ.22ರಂದು ಗುವಾಹಟಿಯಲ್ಲಿ ನಡೆಯಲಿದೆ. ಈ ಸರಣಿಯು ಹೆಚ್ಚು ಮಹತ್ವ ಪಡೆದಿದ್ದು, ದಕ್ಷಿಣ ಆಫ್ರಿಕಾವು ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್(ಡಬ್ಲ್ಯುಟಿಸಿ)ಚಾಂಪಿಯನ್ ಆಗಿದ್ದರೆ, ಭಾರತವು ಈವರ್ಷಾರಂಭದಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಸ್ವದೇಶದಲ್ಲಿ ತೋರಿದ್ದ ಪ್ರಾಬಲ್ಯವನ್ನು ಮುಂದುವರಿಸುವ ಗುರಿ ಇಟ್ಟುಕೊಂಡಿದೆ.

ಪಾಕಿಸ್ತಾನದ ವಿರುದ್ಧ 1-1ರಿಂದ ಪ್ರಯಾಸಕಾರಿ ಡ್ರಾ ಸಾಧಿಸಿರುವ ದಕ್ಷಿಣ ಆಫ್ರಿಕಾ ಕಠಿಣ ಸವಾಲನ್ನು ಎದುರಿಸುತ್ತಿದೆ. ಐತಿಹಾಸಿಕವಾಗಿ ಎರಡು ತಂಡಗಳ ನಡುವಿನ ಸ್ಪರ್ಧೆಯು ತೀವ್ರ ಪೈಪೋಟಿಯಿಂದ ಕೂಡಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ಮಧ್ಯೆ ನಡೆದಿರುವ 44 ಟೆಸ್ಟ್ ಪಂದ್ಯಗಳ ಪೈಕಿ 18ರಲ್ಲಿ ಜಯ ಸಾಧಿಸಿರುವ ದಕ್ಷಿಣ ಆಫ್ರಿಕಾವು ಅಲ್ಪ ಮುನ್ನಡೆ ಪಡೆದಿದೆ. ಭಾರತ ತಂಡವು 16 ಬಾರಿ ಜಯಶಾಲಿಯಾಗಿದೆ. 10 ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿವೆ.

ಭಾರತೀಯ ನೆಲದಲ್ಲಿನ ಸಂಖ್ಯೆಗಳು ಬೇರೆಯೇ ಕತೆಯನ್ನು ಹೇಳುತ್ತವೆ. ಭಾರತದಲ್ಲಿ ಆಡಿರುವ 19 ಟೆಸ್ಟ್ ಪಂದ್ಯಗಳ ಪೈಕಿ ಆತಿಥೇಯರು 11ರಲ್ಲಿ ಜಯ ಸಾಧಿಸಿದ್ದು, ದಕ್ಷಿಣ ಆಫ್ರಿಕಾ ಕೇವಲ 5ರಲ್ಲಿ ಗೆಲುವು ಪಡೆಯುವಲ್ಲಿ ಶಕ್ತವಾಗಿದೆ. ಮೂರು ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿವೆ.

ಪ್ರಸಕ್ತ ಸರಣಿಯು ಶುಭಮನ್ ಗಿಲ್ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದು, ರಿಷಭ್ ಪಂತ್ ವಿಕೆಟ್‌ ಕೀಪಿಂಗ್ ಜೊತೆಗೆ ಉಪ ನಾಯಕನಾಗಿದ್ದಾರೆ.

ಟೆಂಬಾ ಬವುಮಾ ನೇತೃತ್ವದಲ್ಲಿ ದಕ್ಷಿಣ ಆಫ್ರಿಕಾ ತಂಡವು ಹಿರಿಯರು ಹಾಗೂ ಹೊಸ ಪ್ರತಿಭೆಗಳ ಮಿಶ್ರಣದೊಂದಿಗೆ ಸಮತೋಲಿತವಾಗಿದೆ.

ಕಳೆದೊಂದು ದಶಕದಲ್ಲಿ ಉಭಯ ತಂಡಗಳ ನಡುವೆ ತೀವ್ರ ಸ್ಪರ್ಧೆ ಕಂಡುಬಂದಿದೆ. ಹಿಂದಿನ 5 ಟೆಸ್ಟ್ ಪಂದ್ಯಗಳಲ್ಲಿ ರೋಚಕ ಫಲಿತಾಂಶ ಬಂದಿದೆ.

-ದಕ್ಷಿಣ ಆಫ್ರಿಕಾದಲ್ಲಿ 2023-24ರ ಸರಣಿಯು 1-1ರಿಂದ ಡ್ರಾನಲ್ಲಿ ಕೊನೆಗೊಂಡಿದೆ.

-2021-22ರಲ್ಲಿ ದಕ್ಷಿಣ ಆಫ್ರಿಕಾ ತಂಡವು ಸ್ವದೇಶದಲ್ಲಿ 2-1 ಅಂತರದಿಂದ ಜಯಶಾಲಿಯಾಗಿದೆ.

-2019-20ರಲ್ಲಿ ಸ್ವದೇಶದಲ್ಲಿ ನಡೆದಿದ್ದ ಸರಣಿಯಲ್ಲಿ ಭಾರತವು ಪ್ರಾಬಲ್ಯ ಸಾಧಿಸಿದ್ದು, 3-0 ಅಂತರದಿಂದ ವೈಟ್‌ವಾಶ್ ಸಾಧಿಸಿದೆ.

-ದಕ್ಷಿಣ ಆಫ್ರಿಕಾ ತಂಡವು 2017-18ರಲ್ಲಿ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.

-2015-16ರಲ್ಲಿ ಭಾರತ ತಂಡವು ಸ್ವದೇಶದಲ್ಲಿ 3-0 ಅಂತರದಿಂದ ಗೆಲುವು ದಾಖಲಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News