×
Ad

ವಿನೇಶ್‌ ಫೋಗಟ್‌ ಅವರಿಂದಲೂ ತಪ್ಪಾಗಿದೆ, ಆಕೆ ಕೂಡ ಹೊಣೆ ಹೊತ್ತುಕೊಳ್ಳಬೇಕು: ಸೈನಾ ನೆಹ್ವಾಲ್‌

Update: 2024-08-08 17:26 IST

ವಿನೇಶ್‌ ಫೋಗಟ್‌ / ಸೈನಾ ನೆಹ್ವಾಲ್‌ (PTI)

ಹೊಸದಿಲ್ಲಿ: ಕುಸ್ತಿಪಟು ವಿನೇಶ್‌ ಫೋಗಟ್‌ ಅವರು ಒಲಿಂಪಿಕ್ಸ್‌ ಫೈನಲ್‌ ಸ್ಪರ್ಧಿಸುವುದರಿಂದ ಅನರ್ಹರಾಗಿರುವ ಕುರಿತಂತೆ ಪ್ರತಿಕ್ರಿಯಿಸಿರುವ ಭಾರತದ ಬ್ಯಾಡ್ಮಿಂಟನ್‌ ತಾರೆ, ಬಿಜೆಪಿ ನಾಯಕಿ ಸೈನಾ ನೆಹ್ವಾಲ್‌, “ವಿನೇಶ್‌ ಫೋಗಟ್‌ ಅವರಿಂದಲೂ ತಪ್ಪಾಗಿದೆ,” ಎಂದಿದ್ದಾರೆ.

“ಇದು ಆಕೆಯ ಮೊದಲ ಒಲಿಂಪಿಕ್ಸ್‌ ಏನಲ್ಲ. ಮೂರನೇ ಒಲಿಂಪಕ್ಸ್.‌ ಅಥ್ಲೀಟ್‌ ಆಗಿ ಆಕೆಗೆ ನಿಯಮಗಳು ತಿಳಿದಿರಬೇಕು. ತಪ್ಪಾಗಿದ್ದರೆ ಅದು ಹೇಗಾಯಿತು ಎಂದು ನನಗೆ ಗೊತ್ತಿಲ್ಲ. ಇಂತಹ ದೊಡ್ಡ ಕ್ರೀಡಾ ಕಾರ್ಯಕ್ರಮದಲ್ಲಿ ಬೇರೆ ಕುಸ್ತಿಪಟು ವಿಚಾರದಲ್ಲಿ ಹೀಗಾಗಿದ್ದು ನನಗೆ ತಿಳಿದಿಲ್ಲ. ಆಕೆ ಒಬ್ಬ ಅನುಭವಿ ಅಥ್ಲೀಟ್.‌ ಎಲ್ಲೋ ಆಕೆಯ ಕಡೆಯಿಂದಲೂ ತಪ್ಪಾಗಿದೆ. ಆಕೆ ಕೂಡ ಹೊಣೆ ಹೊತ್ತುಕೊಳ್ಳಬೇಕು. ಇಷ್ಟೊಂದು ದೊಡ್ಡ ಪಂದ್ಯ, ಇಂತಹ ತಪ್ಪಾಗಿರುವುದು ಸರಿಯಲ್ಲ,” ಎಂದು ಸೈನಾ ಹೇಳಿದ್ದಾರೆ.

“ಆಕೆ ಏಷ್ಯನ್‌ ಗೇಮ್ಸ್‌ ಚಾಂಪಿಯನ್‌, ಕಾಮನ್ವೆಲ್ತ್‌ ಚಾಂಪಿಯನ್.‌ ಆಕೆಯ ಕಡೆಯಿಂದಲೂ ತಪ್ಪಾಗಿರಬಹುದು. ಇಷ್ಟೊಂದು ದೊಡ್ಡ ಪಂದ್ಯವಾಗಿರುವಾಗ ಯಾವುದೇ ಆಟಗಾರ ತೂಕ ನಿಗದಿತ ಮಿತಿಯಲ್ಲಿರುವಂತೆ ಎಚ್ಚರಿಕೆ ವಹಿಸುತ್ತಾರೆ. ಇಂತಹ ತಪ್ಪು ಹೇಗಾಯಿತು ಎಂಬುದನ್ನು ಆಕೆ ಅಥವಾ ಆಕೆಯ ಕೋಚ್‌ ಉತ್ತರಿಸಬೇಕಿದೆ. ನಾವು ಖಂಡಿತವಾಗಿಯೂ ನಮ್ಮ ಪಾಲಿಗೆ ದೊರೆಯುತ್ತಿದ್ದ ಒಂದು ಪದಕ ಕಳೆದುಕೊಂಡೆವು ಎಂಬ ನಿರಾಶೆಯಾಗಿದೆ,” ಎಂದು ಸೈನಾ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News