×
Ad

ಒಲಿಂಪಿಕ್ಸ್ ಅರ್ಹತಾ ಪಂದ್ಯಾವಳಿಗೆ ವಿನೇಶ್ ಫೋಗಟ್ ಅರ್ಹತೆ

Update: 2024-03-11 22:27 IST

ವಿನೇಶ್ ಫೋಗಟ್ | Photo; PTI 

ಪಟಿಯಾಲ : ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ ಪಡೆಯಲು ಕಿರ್ಗಿಸ್ತಾನ್ ನ ಬಿಶ್ಟೆಕ್ ನಲ್ಲಿ ಮುಂದಿನ ತಿಂಗಳು ನಡೆಯಲಿರುವ ಅರ್ಹತಾ ಪಂದ್ಯಾವಳಿಯಲ್ಲಿ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸುವ ಅರ್ಹತೆಯನ್ನು ಕುಸ್ತಿ ಪಟು ವಿನೇಶ್ ಫೋಗಟ್ ಸೋಮವಾರ ಗಳಿಸಿದ್ದಾರೆ.

ಜಕಾರ್ತ ಏಶ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿರುವ ಫೋಗಟ್, ತನ್ನ ಎದುರಾಳಿ ಶಿವಾನಿಯನ್ನು 11-6 ಅಂಕಗಳಿಂದ ಸೋಲಿಸಿದರು.

ಆದರೆ, ಅವರು 53 ಕೆಜಿ ವಿಭಾಗದಲ್ಲಿ ಅಂಜು ವಿರುದ್ಧ ಟೆಕ್ನಿಕಲ್ ಸುಪೀರಿಯಾರಿಟಿಯಲ್ಲಿ 0-10 ಅಂಗಳಿಂದ ಸೋತರು.

ಮಹಿಳಾ ಕುಸ್ತಿ ಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್ ನ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ನಡೆದ ಸುದೀರ್ಘ ಪ್ರತಿಭಟನೆಯ ನೇತೃತ್ವ ವಹಿಸಿದವರಲ್ಲಿ ವಿನೇಶ್ ಒಬ್ಬರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News