ಆಟಗಾರರ ಒಪ್ಪಂದ ನಿಯಮ ಉಲ್ಲಂಘನೆ ; ಇಂಟರ್‌ನ್ಯಾಶನಲ್ ಲೀಗ್ ಟಿ-20ಯಿಂದ ನವೀನ್‌ವುಲ್ ಹಕ್ 20 ತಿಂಗಳು ನಿಷೇಧ
ನವೀನ್ ಉಲ್-ಹಕ್ | Photo: PTI
ದುಬೈ : ಶಾರ್ಜಾ ವಾರಿಯರ್ಸ್‌ನೊಂದಿಗಿನ ಆಟಗಾರರ ಒಪ್ಪಂದ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಅಫ್ಘಾನಿಸ್ತಾನದ ವೇಗದ ಬೌಲರ್ ನವೀನ್ ಉಲ್-ಹಕ್‌ರನ್ನು ಇಂಟರ್‌ನ್ಯಾಶನಲ್ ಲೀಗ್ ಟಿ-20ನಲ್ಲಿ ಭಾಗವಹಿಸದಂತೆ 20 ತಿಂಗಳು ನಿಷೇಧ ಹೇರಲಾಗಿದೆ.
ನವೀನ್ ಉಲ್ ಹಕ್ ಟೂರ್ನಮೆಂಟ್‌ನ ಮೊದಲ ಆವೃತ್ತಿಯ ಲೀಗ್‌ನಲ್ಲಿ ವಾರಿಯರ್ಸ್‌ಗೆ ಸೇರ್ಪಡೆಯಾಗಿದ್ದರು. ಅವರಿಗೆ ಒಂದು ವರ್ಷ ವಿಸ್ತರಣೆ ಮಾಡುವ ಕೊಡುಗೆ ನೀಡಲಾಗಿತ್ತು. ಆದರೆ ಎರಡನೇ ಆವೃತ್ತಿಯ ಲೀಗ್‌ನಲ್ಲಿ ವಾರಿಯರ್ಸ್ ತಂಡದಲ್ಲಿ ಉಳಿದುಕೊಳ್ಳುವ ನೋಟಿಸ್‌ಗೆ ಸಹಿ ಹಾಕಲು ನವೀನ್ ನಿರಾಕರಿಸಿದ್ದರು.
ದುರದೃಷ್ಟವಶಾತ್ ನವೀನ್-ಉಲ್-ಹಕ್ ಅವರು ಶಾರ್ಜಾ ವಾರಿಯರ್ಸ್‌ನೊಂದಿಗಿನ ತಮ್ಮ ಒಪ್ಪಂದ ಜವಾಬ್ದಾರಿಯನ್ನು ಗೌರವಿಸಲು ವಿಫಲರಾಗಿದ್ದಾರೆ. ಈ ಲೀಗ್‌ಗೆ ಅವರನ್ನು 20 ತಿಂಗಳ ನಿಷೇಧ ವಿಧಿಸುವುದನ್ನು ಹೊರತುಪಡಿಸಿ ಯಾವುದೇ ಆಯ್ಕೆ ಇರಲಿಲ್ಲ. ನವೀನ್ ವಿರುದ್ಧದ ಶಿಸ್ತಿನ ಪ್ರಕ್ರಿಯೆಗಳನ್ನು ಪಾರದರ್ಶಕ ರೀತಿಯಲ್ಲಿ ನಡೆಸಲಾಯಿತು. ಎರಡೂ ಕಡೆಯವರು ತಮ್ಮ ವಾದ ಪ್ರಸ್ತುತ ಪಡಿಸಲು ಅವಕಾಶ ನೀಡಲಾಯಿತು ಎಂದು ವರ್ಲ್ಡ್ ಐಎಲ್‌ಟಿ-20 ಸಿಇಒ ಡೇವಿಡ್ ವೈಟ್ ತಿಳಿಸಿದ್ದಾರೆ.