×
Ad

ಹೃದಯಸ್ಪರ್ಶಿ ಕ್ಷಣ ಹಂಚಿಕೊಂಡ ವಿರಾಟ್ ಕೊಹ್ಲಿ, ಬಾಬರ್ ಆಝಮ್

Update: 2025-02-23 21:28 IST

ವಿರಾಟ್ ಕೊಹ್ಲಿ , ಬಾಬರ್ ಆಝಮ್ | PC : X

ಹೊಸದಿಲ್ಲಿ: ಭಾರತ-ಪಾಕಿಸ್ತಾನ ತಂಡಗಳ ನಡುವೆ ರವಿವಾರ ದುಬೈ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಬಹು ನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕಿಂತ ಮೊದಲು ಬ್ಯಾಟಿಂಗ್ ದಿಗ್ಗಜರಾದ ವಿರಾಟ್ ಕೊಹ್ಲಿ ಹಾಗೂ ಬಾಬರ್ ಆಝಮ್ ಹೃದಯಸ್ಪರ್ಶಿ ಕ್ಷಣವನ್ನು ಹಂಚಿಕೊಂಡರು.

ಇಮಾಮ್‌ವುಲ್ ಹಕ್‌ರೊಂದಿಗೆ ಇನಿಂಗ್ಸ್ ಆರಂಭಿಸಲು ಮೈದಾನಕ್ಕೆ ಇಳಿದ ಬಾಬರ್ ಆಝಮ್‌ರನ್ನು ಕೊಹ್ಲಿ ಆತ್ಮೀಯ ಅಪ್ಪುಗೆಯೊಂದಿಗೆ ಸ್ವಾಗತಿಸಿದರು. ಇಬ್ಬರು ಬ್ಯಾಟಿಂಗ್ ಐಕಾನ್‌ಗಳ ನಡುವಿನ ಕ್ರೀಡಾ ಮನೋಭಾವದ ನಡವಳಿಕೆಯು ಸಾಮಾಜಿಕ ಜಾಲತಾಣದಲ್ಲಿ ತಕ್ಷಣವೇ ವೈರಲ್ ಆಗಿ ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳ ಭಾವನೆಗಳನ್ನು ಸೆಳೆಯಿತು.

ಸಾಂಪ್ರದಾಯಿಕ ತಂಡಗಳ ನಡುವಿನ ಪಂದ್ಯಕ್ಕಿಂತ ಮೊದಲು ಇದು ಸಕಾರಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು.

ಟಾಸ್ ಜಯಿಸಿದ ಪಾಕಿಸ್ತಾನ ತಂಡದ ನಾಯಕ ಮುಹಮ್ಮದ್ ರಿಝ್ವಾನ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಪಾಕ್ ತಂಡವು ಒಂದು ಬದಲಾವಣೆ ಮಾಡಿದ್ದು, ಗಾಯಗೊಂಡಿರುವ ಫಖರ್ ಝಮಾನ್ ಬದಲಿಗೆ ಇಮಾಮ್‌ವುಲ್‌ಹಕ್‌ರನ್ನು ಕಣಕ್ಕಿಳಿಸಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News