×
Ad

ಪಾಕಿಸ್ತಾನ ವಿರುದ್ದ ಟಿ-20 ಸರಣಿಯ ಉಳಿದ ಪಂದ್ಯಗಳಿಗೆ ವಿಲಿಯಮ್ಸನ್ ಅಲಭ್ಯ

Update: 2024-01-15 21:10 IST

ವಿಲಿಯಮ್ಸನ್ | Photo: PTI

ವೆಲ್ಲಿಂಗ್ಟನ್ : ಪಾಕಿಸ್ತಾನ ವಿರುದ್ಧ ದ್ವಿತೀಯ ಟ್ವೆಂಟಿ-20 ಪಂದ್ಯದ ವೇಳೆ ಅಸ್ಥಿರಜ್ಜು ಗಾಯಕ್ಕೆ ಒಳಗಾಗಿದ್ದ ನ್ಯೂಝಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ ಸರಣಿಯಲ್ಲಿ ಇನ್ನುಳಿದ ಪಂದ್ಯಗಳಲ್ಲಿ ಆಡುವ ಸಾಧ್ಯತೆ ಇಲ್ಲ ಎಂದು ಕೋಚ್ ಗ್ಯಾರಿ ಸ್ಟೆಡ್ ಸೋಮವಾರ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಆರಂಭಕ್ಕೆ ಮೂರೇ ವಾರಗಳು ಬಾಕಿ ಇರುವಾಗ ವಿಲಿಯಮ್ಸನ್ ಈಗಾಗಲೇ ಬುಧವಾರ ನಡೆಯಲಿರುವ 3ನೇ ಪಂದ್ಯದಿಂದ ಹೊರಗುಳಿದಿದ್ದಾರೆ.

ಸರಣಿಯ ಕೊನೆಯ ಎರಡು ಪಂದ್ಯಗಳಿಂದಲೂ ಸ್ಟಾರ್ ಬ್ಯಾಟರ್ ಹೊರಗುಳಿಯುವ ಸಾಧ್ಯತೆ ಇದೆ ಎಂದು ಕೋಚ್ ಸ್ಟೆಡ್ ಹೇಳಿದ್ದಾರೆ.

ಟೆಸ್ಟ್ ಪಂದ್ಯಗಳು ಸನಿಹವಾಗುತ್ತಿರುವ ಕಾರಣ ಆ ಪಂದ್ಯಕ್ಕೆ ವಿಲಿಯಮ್ಸನ್ ಫಿಟ್ನೆಸ್ ಪಡೆಯುವುದನ್ನು ಖಚಿತಪಡಿಸುವುದು ಮೊದಲ ಆದ್ಯತೆಯಾಗಿದೆ ಎಂದು ಸ್ಟೆಡ್ ಹೇಳಿದ್ದಾರೆ.

ಸದ್ಯ 5 ಪಂದ್ಯಗಳ ಸರಣಿಯಲ್ಲಿ ನ್ಯೂಝಿಲ್ಯಾಂಡ್ 2-0 ಮುನ್ನಡೆಯಲ್ಲಿದೆ. ರವಿವಾರದ 2ನೇ ಟಿ-20 ಪಂದ್ಯದಲ್ಲಿ ಗಾಯಗೊಂಡು ನಿವೃತ್ತಿಯಾಗುವ ಮೊದಲು ವಿಲಿಯಮ್ಸನ್ 15 ಎಸೆತಗಳಲ್ಲಿ 26 ರನ್ ಗಳಿಸಿದ್ದರು. ಈ ಪಂದ್ಯವನ್ನು ನ್ಯೂಝಿಲ್ಯಾಂಡ್ 21 ರನ್ನಿಂದ ಗೆದ್ದುಕೊಂಡಿದೆ.

ಬ್ಯಾಟಿಂಗ್ ಸರದಿಯಲ್ಲಿ ವಿಲಿಯಮ್ಸನ್ ಸ್ಥಾನಕ್ಕೆ ಟಿಮ್ ಸೆಫರ್ಟ್ ಆಡುವ ನಿರೀಕ್ಷೆ ಇದೆ ಎಂದು ಸ್ಟೆಡ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News