ವಿಂಬಲ್ಡನ್ ಫೇಸ್ ಬುಕ್ ಪೇಜಲ್ಲಿ ರಾರಾಜಿಸಿದ ಕನ್ನಡ
Update: 2023-07-11 12:47 IST
ರೋಹನ್ ಬೋಪಣ್ಣ (Photo : Facebook)
ಲಂಡನ್: ವಿಂಬಲ್ಡನ್ ಪುರುಷರ ಡಬಲ್ಸ್ ವಿಭಾಗದಲ್ಲಿ ಕರ್ನಾಟಕ ಮೂಲದ ಭಾರತೀಯ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು, ಇದಕ್ಕೆ ಅಭಿನಂದನೆ ಸಲ್ಲಿಸುವ ಸಲುವಾಗಿ ಪ್ರತಿಷ್ಠಿತ ವಿಂಬಲ್ಡನ್ ಕನ್ನಡದಲ್ಲೇ ಟ್ವೀಟ್ ಮಾಡಿ ಗೌರವಿಸಿದೆ. ಫೇಸ್ ಬುಕ್ ಪೋಸ್ಟ್ ಕೂಡಾ ಮಾಡಿದೆ.
ವಿಂಬಲ್ಡನ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕನ್ನಡದಲ್ಲೇ ರೋಹನ್ ಬೋಪಣ್ಣ ಅವರನ್ನು ʼಭಾರತದ ಸೂಪರ್ ಸ್ಟಾರ್ʼ ಎಂದು ಟ್ವೀಟ್ ಮಾಡುವ ಮೂಲಕ ಗೌರವ ಸೂಚಿಸಿದೆ. ಇದು ಕನ್ನಡಿಗರ ಗಮನ ಸೆಳೆದಿದೆ.
ಈ ಟ್ವೀಟ್‌ಗೆ ರೋಹನ್ ಬೋಪಣ್ಣ ಅವರು ವಿಂಬಲ್ಡನ್‌ಗೆ ಕನ್ನಡದಲ್ಲೇ ಪ್ರತಿಕ್ರಿಯಿಸುವ ದನ್ಯವಾದಗಳನ್ನು ತಿಳಿಸಿದ್ದಾರೆ. ಪ್ರತಿಷ್ಠಿತ ಜಾಗತಿಕ ಟೂರ್ನಿ ನಡೆಸುವ ವಿಂಬಲ್ಡನ್ ಕನ್ನಡ ಬಳಸಿದ್ದಕ್ಕೆ ಕನ್ನಡಿಗರು ಖುಷಿಯಾಗಿದ್ದಾರೆ.