×
Ad

ವಿಂಬಲ್ಡನ್: ತನ್ನ ವಿರುದ್ದ ಬೊಬ್ಬಿಡುತ್ತಿದ್ದ ಪ್ರೇಕ್ಷಕರಿಗೆ ಸನ್ನೆ ಮೂಲಕ ತಿರುಗೇಟು ನೀಡಿದ ಜೊಕೊವಿಕ್

Update: 2023-07-15 13:43 IST

ಲಂಡನ್: ವಿಂಬಲ್ಡನ್ ಟೂರ್ನಿಯಲ್ಲಿ ತಾನಾಡಿರುವ ಮೊದಲೆರಡು ಪಂದ್ಯಗಳಲ್ಲಿ ಸರ್ಬಿಯದ ಸ್ಟಾರ್ ಆಟಗಾರ ನೊವಾಕ್ ಜೊಕೊವಿಕ್ ಅವರು ಸೆಂಟರ್ ಕೋರ್ಟ್ ಪ್ರೇಕ್ಷಕರಿಂದ ಗದ್ದಲ ಎದುರಿಸಿದರು, ನಂತರ ಅವರು ತೀವ್ರ ಪ್ರತಿಕ್ರಿಯೆ ನೀಡಿದ್ದರು.ಶುಕ್ರವಾರದ ನಡೆದ ಪುರುಷರ ಸಿಂಗಲ್ಸ್ ಸೆಮಿ ಫೈನಲ್ ಪಂದ್ಯದಲ್ಲೂ ಪ್ರೇಕ್ಷಕರಿಂದ ಬೊಬ್ಬೆ ಎದುರಿಸಬೇಕಾಗಿದೆ.

ಕಳೆದ ಕೆಲವು ವರ್ಷಗಳಿಂದ ವಿಂಬಲ್ಡನ್ ಹಾಗೂ ಐಕಾನಿಕ್ ಸೆಂಟರ್ ಕೋರ್ಟ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರ ಸಹಜವಾಗಿ ಪ್ರೇಕ್ಷಕರು ತನಗೆ ಬೆಂಬಲ ನೀಡಬೇಕೆಂದು ನಿರೀಕ್ಷಿಸುತ್ತಾನೆ. ಆದರೆ ವಿಂಬಲ್ಡನ್ ನಲ್ಲಿ ಒಂಬತ್ತನೇ ಬಾರಿ ಫೈನಲ್ ಗೆ ತಲುಪಿ ಸತತ ಐದನೇ ಪ್ರಶಸ್ತಿಯ ಹಾದಿಯಲ್ಲಿರುವ ಜೊಕೊವಿಕ್ ಗೆ ಅಂತಹ ಪರಿಸ್ಥಿತಿ ಇರಲಿಲ್ಲ. ಜೊಕೊವಿಕ್ ಮೊದಲ ಎರಡು ಪಂದ್ಯಗಳಲ್ಲಿ ಸೆಂಟರ್ ಕೋರ್ಟ್ ನ ಪ್ರೇಕ್ಷಕರಿಂದ ಅವರು ಬೊಬ್ಬೆ ಎದುರಿಸಿದ್ದರು. ನಂತರ ಅವರು ಬಲವಾದ ಹೇಳಿಕೆ ನೀಡಿದ್ದರು.ಶುಕ್ರವಾರ ಸಂಜೆ ಇಟಲಿಯ ಜಾನಿಕ್ ಸಿನ್ನರ್ ವಿರುದ್ಧದ ಸೆಮಿಫೈನಲ್ನಲ್ಲಿ ಪ್ರೇಕ್ಷಕರು ತನ್ನನ್ನು ಗುರಿಯಾಗಿಸಿ ಬೊಬ್ಬೆ ಹಾಕಿದಾಗ 36 ವರ್ಷದ ಜೊಕೊವಿಕ್ ಒಂದಲ್ಲ, ಎರಡು ಬಾರಿ ವ್ಯಂಗ್ಯಭರಿತ ಸನ್ನೆಗಳ ಮೂಲಕ ಜನಸಮೂಹಕ್ಕೆ ತಕ್ಕ ಪ್ರತಿಕ್ರಿಯೆ ನೀಡಿದರು.

ಮೂರನೇ ಸೆಟ್ನ 10 ನೇ ಗೇಮ್ನಲ್ಲಿ ಜೊಕೊವಿಕ್ ಸರ್ವ್ ಗೆ ತಯಾರಾದಾಗ, ಪ್ರೇಕ್ಷಕರು ಸಿನ್ನರ್ ಗಾಗಿ ಹುರಿದುಂಬಿಸಲು ಆರಂಭಿಸಿದರು, ಭಾಗಶಃ ಪ್ರೇಕ್ಷಕರು ಇಟಲಿ ಆಟಗಾರನಿಂದ ಹೋರಾಟವನ್ನು ಬಯಸಿದ್ದರು. ಆಗ ಪ್ರೇಕ್ಷಕರೊಬ್ಬರ ಮೇಲೆ ಸಿಟ್ಟಿಗೆದ್ದ ಜೊಕೊವಿಕ್ ಬೇಸ್ ಲೈನ್ನಿಂದ ಹಿಂದೆ ಸರಿದರು ವ್ಯಂಗ್ಯವಾಗಿ ಚಪ್ಪಾಳೆ ತಟ್ಟಿದರು.

ಏಳು ಬಾರಿಯ ಚಾಂಪಿಯನ್ ಜೊಕೊವಿಕ್ ವಿರುದ್ಧ ಪ್ರೇಕ್ಷಕರಿಂದ ಬೊಬ್ಬೆ ಮುಂದುವರಿಯಿತು. ಆಗ ಅವರು ಅಳುವಂತೆ ನಟಿಸುವ ಮೂಲಕ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News