×
Ad

ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್: ಫೈನಲ್ ಗೆ ಅರ್ಹತೆ ಪಡೆದ ನೀರಜ್ ಚೋಪ್ರಾ

Update: 2023-08-25 14:29 IST

Photo: Twitter

ಬುಡಾಪೆಸ್ಟ್ : ಹಂಗೇರಿಯ ಬುಡಾಪೆಸ್ಟ್ ನಲ್ಲಿ  ಶುಕ್ರವಾರ ನಡೆದ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಆಡುವ ಮೂಲಕ ನೀರಜ್ ಚೋಪ್ರಾ ಅವರು ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ತಮ್ಮ ಅಭಿಯಾನವನ್ನು ಆರಂಭಿಸಿದರು. ಭಾರತದ ಸ್ಟಾರ್ ಅತ್ಲೀಟ್ ತನ್ನ ಮೊದಲ ಪ್ರಯತ್ನದಲ್ಲಿ 88.77 ಮೀಟರ್ ಗಳನ್ನು ದಾಖಲಿಸಿದರು, ಈ ಋತುವಿನಲ್ಲಿ ಶ್ರೇಷ್ಠ ನಿರ್ವಹಣೆ ತೋರಿದ ನೀರಜ್ ಫೈನಲ್ ಗೆ ಅರ್ಹತೆ ಪಡೆದರು.

ಒಲಿಂಪಿಕ್ಸ್ ಚಾಂಪಿಯನ್ ನೀರಜ್ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗುವತ್ತ ಚಿತ್ತಹರಿಸಿದ್ದಾರೆ. ಫೈನಲ್ ಸ್ಪರ್ಧೆಯು ರವಿವಾರ ನಡೆಯಲಿದೆ.

ಈ ಪ್ರಕ್ರಿಯೆಯಲ್ಲಿ ನೀರಜ್ ಪ್ಯಾರಿಸ್ ಒಲಿಂಪಿಕ್ ಗೇಮ್ಸ್ ಗೂ ಅರ್ಹತೆ ಗಿಟ್ಟಿಸಿಕೊಂಡರು.

ಒಟ್ಟಾರೆಯಾಗಿ 27 ಜಾವೆಲಿನ್ ಎಸೆತಗಾರರನ್ನು ಎ ಹಾಗೂ ಬಿ ಗುಂಪುಗಳಾಗಿ ವಿಂಗಡಿಸಲಾಗಿದೆ.  ರವಿವಾರದಂದು ನಿಗದಿಯಾಗಿರುವ 12 ಸ್ಪರ್ಧಿಗಳಿರುವ ಫೈನಲ್ ಗಾಗಿ ಅರ್ಹತಾ ಸುತ್ತನ್ನು ಆಡಲಾಗುತ್ತಿದೆ.

ಫೈನಲ್ ಗೆ ಸ್ವಯಂ ಆಗಿ ಅರ್ಹತೆ ಪಡೆಯಲು 83.00 ಮೀ.  ಜಾವೆಲಿನ್ ಎಸೆಯಬೇಕು. ನೀರಜ್ ಎ ಗುಂಪಿನ ಪಟ್ಟಿಯಲ್ಲಿ 18ನೇ ಆಟಗಾರನಾಗಲಿದ್ದಾರೆ.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News