WPL 2025 | ರಿಚಾ ಘೋಷ್ ಸ್ಫೋಟಕ ಆಟ : ಉದ್ಘಾಟನಾ ಪಂದ್ಯದಲ್ಲಿ ಶುಭಾರಂಭ ಮಾಡಿದ ಆರ್‌ಸಿಬಿ
x@wplt20
ವಡೋದರಾ : ಇಲ್ಲಿನ ಬಿಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡದ ವಿರುದ್ಧ ರೋಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 6 ವಿಕೆಟ್ ಗಳ ಜಯ ಸಾಧಿಸಿದೆ.
ಗುಜರಾತ್ ಜೈಂಟ್ಸ್ ನೀಡಿದ್ದ 202 ರನ್ ಗಳ ಕಠಿಣ ಗುರಿ ಬೆನ್ನತ್ತಲು ಬ್ಯಾಟಿಂಗ್ ಗೆ ಇಳಿದ ಆರ್‌ಸಿಬಿ ತಂಡ ಕಲಪೆ ಆರಂಭ ಪಡೆಯಿತು. ಆರಂಭಿಕರಾಗಿ ಬ್ಯಾಟಿಂಗ್ ಇಳಿದಿದ್ದ ನಾಯಕಿ ಸ್ಮೃತಿ ಮಂದಾನ 7 ಎಸೆತಗಳಲ್ಲಿ 9 ರನ್ ಗಳಿಸಿ ಔಟ್ ಆದರೆ, ಡ್ಯಾನಿ ವ್ಯಾಟ್-ಹಾಡ್ಜ್ 4 ಎಸೆತಗಳಲ್ಲಿ 4 ರನ್ ಗಳಿಸಿ ಔಟಾದರು.
ನಂತರ ಕ್ರಮಾಂಕದಲ್ಲಿ ಬಂದ ಎಲ್ಲಿಸ್ ಪೆರ್ರಿ ಮತ್ತು ರಾಘ್ವಿ ಬಿಸ್ಟ್ ಉತ್ತಮ ಪ್ರದರ್ಶನ ನೀಡಿದರೂ, 10.6 ಓವರ್ ನಲ್ಲಿ ರಾಘ್ವಿ ಬಿಸ್ಟ್ 27 ಎಸೆತಗಳಲ್ಲಿ 3 ಬೌಂಡರಿ ನೆರವಿನೊಂದಿಗೆ 25 ರನ್ ಬಾರಿಸಿ ಔಟಾದರೆ, 10.6 ಓವರ್ ನಲ್ಲಿ 34 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸ್ ನೆರವಿನೊಂದಿಗೆ 58 ರನ್ ಬಾರಿಸಿ ಔಟಾದರು.
ಬಳಿಕ ಸ್ಫೋಟಕ ಬ್ಯಾಟಿಂಗ್ ಮಾಡಿದ ರಿಚಾ ಘೋಷ್ 27 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸ್ ನೆರವಿನೊಂದಿಗೆ 64 ರನ್ ಬಾರಿಸಿದರೆ, ಅವರಿಗೆ ಜೊತೆಯಾದ ಕನಿಕಾ ಅಹುಜಾ 13 ಎಸೆತಗಳಲ್ಲಿ 4 ಬೌಂಡರಿ 30 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.