×
Ad

WPL | ಸತತ 2ನೇ ಗೆಲುವು ದಾಖಲಿಸಿದ ಮುಂಬೈ ಇಂಡಿಯನ್ಸ್‌

Update: 2024-02-25 22:58 IST

Photo : x/@wplt20

ಬೆಂಗಳೂರು : ಇಲ್ಲಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ವಿಮೆನ್ಸ್ ಪ್ರೀಮಿಯರ್ ಲೀಗ್ ನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡವು  ಗುಜರಾತ್‌ ಜೈಂಟ್ಸ್‌ ವಿರುದ್ಧ 5 ವಿಕೆಟ್‌ ಗಳ ಭರ್ಜರಿ ಗೆಲುವು ದಾಖಲಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಗೆ ಇಳಿಯಲ್ಪಟ್ಟಿದ್ದ ಗುಜರಾತ್‌ ತಂಡವು ನಿಗಧಿತ 20 ಓವರ್‌ ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 126 ರನ್‌ ಪೇರಿಸಿತ್ತು. ಈ ಅಲ್ಪ ಮೊತ್ತದ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್‌ ತಂಡವು ಆರಂಭಿಕ ಅಘಾತದ ಹೊರತಾಗಿಯೂ ಪಂದ್ಯದಲ್ಲಿ ಹಿಡಿತ ಸಾಧಿಸಿತು. ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ 46 ರನ್‌ ಬಾರಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ನಿರ್ವಹಿಸಿದರೆ, ಅವರಿಗೆ ಸಾಥ್‌ ನೀಡಿದ್ದ ಅಮೆಲಿಯಾ ಕೆರ್ 31 ರನ್‌ ಕೊಡುಗೆ ನೀಡಿ ತಹುಹು ಬೌಲಿಂಗ್‌ ನಲ್ಲಿ ಎಲ್‌ಬಿಡಬ್ಲ್ಯೂ ಆದರು. ತಂಡದ ಪರ ನ್ಯಾಟ್ ಸ್ಕಿವರ್ ಬ್ರಂಟ್ 22 ರನ್, ಯಶಿಕ ಹಾಗೂ ಮ್ಯಾಥ್ಯೂಸ್ ತಲಾ 7 ರನ್‌ ಬಾರಿಸಿದ್ದರು. ‌

ಗುಜರಾತ್‌ ಜೈಂಟ್ಸ್‌ ಪರ ತನುಜಾ ಕನ್ವರ್‌ 2 ವಿಕೆಟ್‌ ಪಡೆದರೆ, ಬ್ರೀಸ್‌ ಹಾಗೂ ತಹುಹು ತಲಾ ಒಂದು ವಿಕೆಟ್‌ ಪಡೆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News