×
Ad

WPL | ಆರ್‌ಸಿಬಿಯ ಬಿಗಿದಾಳಿಗೆ ನಲುಗಿದ ಯುಪಿ ವಾರಿಯರ್ಸ್

Update: 2024-02-24 22:55 IST

ಬೆಂಗಳೂರು : ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ವಿಮೆನ್ಸ್ ಪ್ರೀಮಿಯರ್ ಲೀಗ್ ನ ಆರ್‌ಸಿಬಿ ವಿರುದ್ಧದ ರೋಚಕ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವು 2 ರನ್ ಗಳಿಂದ ಸೋತಿತು.

ಆರ್‌ಸಿಬಿ ನೀಡಿದ್ದ 158 ರನ್‌ ಗಳ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್‌ ತಂಡವು 20 ಓವರ್‌ ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 155 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಆರ್‌ಸಿಬಿ ಪರ ಬಿಗಿ ದಾಳಿ ನಡೆಸಿದ ಶೋಭನಾ ಆಶಾ ಯುಪಿ ವಾರಿಯರ್ಸ್‌ ತಂಡವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. 4 ಓವರ್‌ ಗಳಲ್ಲಿ 5 ವಿಕೆಟ್‌ ಪಡೆದ ಆಶಾ, ಯುಪಿ ವಾರಿಯರ್ಸ್‌ ನ ಪ್ರಮುಖ ಬ್ಯಾಟರ್‌ ಗಳಿಗೆ  ಪೆವಿಲಿಯನ್‌ ಹಾದಿ ತೋರಿಸಿದರು.

ಯುಪಿ ವಾರಿಯರ್ಸ್‌ ನ ವೃಂದಾ ದಿನೇಶ್‌, ಟಹ್ಲಿಯಾ ಮೆಗ್ರಾಥ್‌, ಗ್ರೇಸ್‌ ಹರಿಸ್‌, ಶ್ವೇತಾ ಸೆಹ್‌ರಾವತ್‌, ಕಿರಣ್‌ ನೌರಿಗೆ ಆಶಾ ದಾಳಿಗೆ ಸಿಲುಕಿದ ಬ್ಯಾಟರ್‌  ಗಳು. ತಮ್ಮ ಕೊನೆಯ, 16 ನೇ ಓವರ್‌ ನಲ್ಲಿ ಮೂರು ವಿಕೆಟ್‌ ಕಬಳಿಸುವ ಮೂಲಕ ಶೋಭನಾ ಆಶಾ ತಮ್ಮ ಸ್ಪಿನ್‌ ಮೋಡಿ ಪ್ರದರ್ಶಿಸಿದರು. ಪಂದ್ಯ ಕೊನೆಯವರೆಗೂ ರೋಚಕ ಕ್ಷಣ ಪಡೆದುಕೊಂಡರೂ ತಮ್ಮ ಸಂಘಟಿತ ದಾಳಿಗೆ ಆರ್‌ಸಿಬಿ ಬೌಲರ್‌ಗಳು ಬೆಂಗಳೂರಿನ ಕ್ರಿಕೆಟ್‌ ಪ್ರೇಮಿಗಳಿಗೆ ರಸದೌತಣ ಬಡಿಸಿದರು.

ಯುಪಿ ಪರ ಗ್ರೆಸ್‌ ಹರಿಸ್‌ 38 ಗರಿಷ್ಠ ಮೊತ್ತ ದಾಖಲಿಸಿದರು. ಇನ್ನುಳಿದಂತೆ ಶ್ವೇತಾ ಸೆಹ್‌ರಾವತ್‌ 31, ಟಹ್ಲಿಯಾ ಮೆಗ್ರಾಥ್‌ 22 ರನ್‌ ಗಳಿಸಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News