ತಂದೆ-ತಾಯಿಗೆ ಚೊಚ್ಚಲ ಶತಕ ಸಮರ್ಪಿಸಿದ ಯಶಸ್ವಿ ಜೈಸ್ವಾಲ್
"ನನಗೆ ಹಾಗೂ ನನ್ನ ಕುಟುಂಬಕ್ಕೆ ಇದು ತುಂಬಾ ಭಾವನಾತ್ಮಕ ಕ್ಷಣವಾಗಿದೆ. ನನ್ನ ಪಾಲಿಗೆ ಎಲ್ಲ ರೀತಿಯಲ್ಲೂ ಇದು ಸುದೀರ್ಘ ಪ್ರಯಾಣವಾಗಿದೆ. ನನ್ನನ್ನು ಬೆಂಬಲಿಸಿದ ಎಲ್ಲರಿಗೂ, ನನಗೆ ಸಹಾಯ ಮಾಡಿದ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಈ ಶತಕವನ್ನು ನನ್ನ ತಾಯಿ ಹಾಗೂ ತಂದೆಗೆ ಅರ್ಪಿಸಲು ಬಯಸುತ್ತೇನೆ, ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ನಾನು ಈಗ ಹೆಚ್ಚು ಹೇಳುವುದಿಲ್ಲ ... ನನಗೆ ಸಂತೋಷವಾಗಿದೆ, ಇದು ಕೇವಲ ಒಂದು ಆರಂಭವಾಗಿದೆ, ನಾನು ಬಹಳಷ್ಟು ಸಾಧಿಸಬೇಕಾಗಿದೆ’’ಎಂದು ಯಶಸ್ವಿ ಹೇಳಿದ್ದಾರೆ.
Photograph: BCCI/Twitter
ಡೊಮಿನಿಕಾ: ಭಾರತದಂತಹ ತೀವ್ರ ಸ್ಪರ್ಧೆಯನ್ನು ಹೊಂದಿರುವ ದೇಶದಲ್ಲಿ ರಾಷ್ಟ್ರೀಯ ಕ್ರಿಕೆಟ್ ತಂಡದ ಜರ್ಸಿಯನ್ನು ಧರಿಸುವುದು ಸುಲಭದ ಮಾತಲ್ಲ. ಅನೇಕ ಯುವಕರು ಹಿರಿಯರ ಕ್ರಿಕೆಟ್ ತಂಡದ ಬಾಗಿಲು ತಟ್ಟುತ್ತಾರೆ. ಆದರೆ ಬೆರಳೆಣಿಕೆಯಷ್ಟು ಮಂದಿ ಮಾತ್ರ ವಿಶೇಷವಾಗಿ ಟೆಸ್ಟ್ ಕ್ರಿಕೆಟ್ ತಂಡಕ್ಕೆ ಬರುತ್ತಾರೆ. ಯಶಸ್ವಿ ಜೈಸ್ವಾಲ್ ದೇಶೀಯ ಕ್ರಿಕೆಟ್ ನಲ್ಲಿ ತಮ್ಮ ಸ್ಥಿರ ಪ್ರದರ್ಶನದೊಂದಿಗೆ ಹಿರಿಯ ರಾಷ್ಟ್ರೀಯ ತಂಡವನ್ನು ಪ್ರವೇಶಿಸಿರುವ ಅಪರೂಪದ ಆಟಗಾರ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ತನ್ನ ಚೊಚ್ಚಲ ಅಂತರಾಷ್ಟ್ರೀಯ ಶತಕವನ್ನು ಗಳಿಸಿದ ನಂತರ ಜೈಸ್ವಾಲ್ ಭಾವನಾತ್ಮಕ ಸಂದರ್ಶನವನ್ನು ನೀಡಿದ್ದು ಅದು ಎಲ್ಲರ ಹೃದಯವನ್ನು ತಟ್ಟಿದೆ.
ಬಡ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಎಡಗೈ ಆರಂಭಿಕ ಬ್ಯಾಟರ್ ಗೆ ಕ್ರಿಕೆಟ್ ಪ್ರಯಾಣವು ಸುಲಭವಾಗಿರಲ್ಲ. ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸಿದ ನಂತರ ಮಾತನಾಡಿದ ಜೈಸ್ವಾಲ್ ಭಾವುಕರಾಗಿ ತಮ್ಮ ಕುಟುಂಬಕ್ಕೆ ಹಾಗೂ ತನ್ನನ್ನು ಬೆಂಬಲಿಸಿದ ಎಲ್ಲರಿಗೂ ಮನ್ನಣೆ ನೀಡಿದ್ದಾರೆ. ಆದರೆ, ಇದು ತನ್ನ ವೃತ್ತಿಜೀವನದ ಆರಂಭ ಅಷ್ಟೇ ಎಂದಿದ್ದಾರೆ.
"ನನಗೆ ಹಾಗೂ ನನ್ನ ಕುಟುಂಬಕ್ಕೆ ಇದು ತುಂಬಾ ಭಾವನಾತ್ಮಕ ಕ್ಷಣವಾಗಿದೆ. ನನ್ನ ಪಾಲಿಗೆ ಎಲ್ಲ ರೀತಿಯಲ್ಲೂ ಇದು ಸುದೀರ್ಘ ಪ್ರಯಾಣವಾಗಿದೆ. ನನ್ನನ್ನು ಬೆಂಬಲಿಸಿದ ಎಲ್ಲರಿಗೂ, ನನಗೆ ಸಹಾಯ ಮಾಡಿದ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಈ ಶತಕವನ್ನು ನನ್ನ ತಂದೆ-ತಾಯಿಗೆ ಅರ್ಪಿಸಲು ಬಯಸುತ್ತೇನೆ, ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ನಾನು ಈಗ ಹೆಚ್ಚು ಹೇಳುವುದಿಲ್ಲ ... ನನಗೆ ಸಂತೋಷವಾಗಿದೆ, ಇದು ಕೇವಲ ಒಂದು ಆರಂಭವಾಗಿದೆ, ನಾನು ಇನ್ನು ಸಾಕಷ್ಟು ಸಾಧಿಸಬೇಕಾಗಿದೆ’’ಎಂದು ಯಶಸ್ವಿ ಹೇಳಿದ್ದಾರೆ.
ಯಶಸ್ವಿ ಜೈಸ್ವಾಲ್ ಅವರ ಅಜೇಯ ಚೊಚ್ಚಲ ಟೆಸ್ಟ್ ಶತಕ ಮತ್ತು ನಾಯಕ ರೋಹಿತ್ ಶರ್ಮಾ(103 ರನ್) ಅವರೊಂದಿಗಿನ ದಾಖಲೆಯ ಆರಂಭಿಕ ಜೊತೆಯಾಟದ ನೆರವಿನಿಂದ ಮೊದಲ ಟೆಸ್ಟ್ನ ಎರಡನೇ ದಿನದಾಟದಂತ್ಯದ ವೇಳೆಗೆ ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್ ಮೊತ್ತ 150 ಕ್ಕೆ ಪ್ರತ್ಯುತ್ತರವಾಗಿ ಭಾರತ ಎರಡು ವಿಕೆಟ್ ನಷ್ಟಕ್ಕೆ 312 ರನ್ನುಗಳ ಗಳಿಸಿತು.
ಜೈಸ್ವಾಲ್ ಔಟಾಗದೆ 143 ರನ್ ಗಳಿಸಿದರು.
A special dedication after a special start in international cricket! #TeamIndia | #WIvIND | @ybj_19 pic.twitter.com/Dsiwln3rwt
— BCCI (@BCCI) July 14, 2023