‘ಫುಡ್‍ಕೋರ್ಟಿಗೆ ಅಕ್ರಮವಾಗಿ ಮೆಟ್ರೋ ಜಾಗ’; ಲೋಕಾಯುಕ್ತಕ್ಕೆ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ದೂರು
Update: 2025-12-03 23:54 IST
ಬೆಂಗಳೂರು : ಮೆಟ್ರೋ ಅಧಿಕಾರಿಗಳು ಫುಡ್ ಕೋರ್ಟಿಗೆ ಅಕ್ರಮವಾಗಿ ಜಾಗ ನೀಡುತ್ತಿದ್ದಾರೆ. ಇದರ ವಿರುದ್ಧ ಲೋಕಾಯುಕ್ತಕ್ಕೆ ದೂರು ಕೊಡಲಾಗಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ, ಶಾಸಕ ಸಿ.ಕೆ.ರಾಮಮೂರ್ತಿ ತಿಳಿಸಿದ್ದಾರೆ.
ಬುಧವಾರ ಲೋಕಾಯುಕ್ತ ಕಚೇರಿಗೆ ತೆರಳಿ ದೂರು ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮೆಟ್ರೋ ವಾಹನ ನಿಲ್ದಾಣದ ಜಾಗದಲ್ಲಿ ಹೋಟೆಲ್ ಉದ್ಯಮಿಗಳಿಗೆ ಜಾಗ ಕೊಡುತ್ತಿರುವುದು ಇದು ಸರಿಯಲ್ಲ. ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ಮತ್ತು ಶೌಚಾಲಯ ವ್ಯವಸ್ಥೆ ಕಲ್ಪಿಸುತ್ತಿಲ್ಲ ಎಂದು ಆಕ್ಷೇಪಿಸಿದರು.
ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ. ಅಡುಗೆ ಅನಿಲ ಸಮಸ್ಯೆಯಿಂದ ಅನಾಹುತ ಆಗುವ ಸಾಧ್ಯತೆ ಇದೆ. ಮೆಟ್ರೋ ಎಂ.ಡಿ., ಮುಖ್ಯ ಇಂಜಿನಿಯರ್, ಜಿಬಿಎ ಮುಖ್ಯ ಆಯುಕ್ತರ ವಿರುದ್ಧ ದೂರು ಕೊಟ್ಟಿದ್ದೇವೆ ಎಂದ ಅವರು, ಬಿಡಿಎ ಹಸಿರು ವಲಯ ಎಂದಿದೆಯೋ ಅಲ್ಲಿ ಅವಕಾಶ ಕೊಡದಿರಲು ಮನವಿ ಮಾಡಿದ್ದೇವೆ ಎಂದರು.